ಕರ್ನಾಟಕ

ಸರಸವಾಡುವಾಗಲೇ ಜಗಳವಾಡಿ ಬೆತ್ತಲೆಯಿದ್ದ ಪ್ರಿಯಕರನನ್ನೇ ಕೊಂದು ಬೆತ್ತಲೆ ತಿರುಗಿದ ಮಹಿಳೆ

Pinterest LinkedIn Tumblr


ಹಾಸನ: ಸರಸವಾಡುವಾಗಲೇ ಜಗಳವಾಡಿ ಬೆತ್ತಲೆಯಿದ್ದ ಪ್ರಿಯಕರನನ್ನೇ ಬಡಿದು ಕೊಂದು ಮಹಿಳೆಯೂ ಬೆತ್ತಲೆಯಾಗಿಯೇ ಓಡಿದ ಘಟನೆ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ. ಆರೋಪಿ ಮಹಿಳೆ ಬೆತ್ತಲಾಗಿ ಓಡಾಡಿದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಡಿಸೆಂಬರ್ 1ರ ರಾತ್ರಿ ಹೊಳೆನರಸೀಪುರದ ಮಳಿಗೆ ಆವರಣದಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಆಧಾರದ ಮೇರೆಗೆ ಹೊಳೆನರಸೀಪುರ ಪೊಲೀಸರು ಹತ್ಯೆ ಪ್ರಕರಣ ಬೇಧಿಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಅರಕಲಗೂಡು ತಾಲೂಕಿನ ಬಸವಾಪಟ್ಟಣ ನಿವಾಸಿ ಮಂಜು(43) ಕೊಲೆಯಾದ ದುರ್ದೈವಿ. ಹೊಳೆನರಸೀಪುರದ ವಸಂತಾ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ವಸಂತಾ ಜೊತೆ ಮಂಜು ಅನೈತಿಕ ಸಂಬಂಧವಿತ್ತು. ರಾತ್ರಿ ಒಟ್ಟಿಗೇ ಇಬ್ಬರು ಕುಡಿದು, ತಿಂದು ಸರಸದಲ್ಲಿ ತೊಡಗಿರುವಾಗಲೇ ಮಂಜು ಮೇಲೆ ವಸಂತಾ ಹಲ್ಲೆ ಮಾಡಿ ಕೊಲೆಗೈದಿದ್ದಾಳೆ.

ಇಬ್ಬರೂ ಬೆತ್ತಲೆ ಇರುವಾಗಲೇ ಬಡಿದಾಡಿಕೊಂಡು, ವಂಸತಾ ದೊಣ್ಣೆಯಿಂದ ಮಂಜು ತಲೆಗೆ ಹೊಡೆದು ಬೆತ್ತಲಾಗೇ ಓಡುತ್ತಿರೊ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಲೆಗೆ ತೀವ್ರ ಪೆಟ್ಟು ಬಿದ್ದು ಅತಿಯಾಗಿ ರಕ್ತಸ್ರಾವವಾದ ಪರಿಣಾಮ ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸೋಮವಾರ ಪುರಸಭೆ ಮಳಿಗೆ ಮುಂದೆ ಮೈಮೇಲೆ ಬಟ್ಟೆಯಿಲ್ಲದ ಸ್ಥಿತಿಯಲ್ಲಿಯೇ ಮಂಜು ಮೃತದೇಹ ಪತ್ತೆಯಾಗಿತ್ತು. ಬಳಿಕ ಸ್ಥಳೀಯ ಸಿಸಿಟಿವಿ ಕ್ಯಾಮೆರಾ ದೃಶ್ಯ ಹಾಗು ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸಿಪಿಐ ಅಶೋಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ವಂಸತಾಳನ್ನು ಬಂಧಿಸಲಾಗಿದೆ.

Comments are closed.