ಕರ್ನಾಟಕ

ಟೆಕ್ಕಿಗಳ ಪ್ರೀತಿಗೆ ಕುಟುಂಬದವರ ಅಡ್ಡಿ, ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

Pinterest LinkedIn Tumblr


ಚಂದಾಪುರ: ತಮ್ಮಿಬ್ಬರ ಪ್ರೀತಿಯನ್ನು ಮನೆಯವರು ಒಪ್ಪುತ್ತಿಲ್ಲ ಎಂದು ಸಾಫ್ಟ್‌ವೇರ್‌ ಉದ್ಯೋಗಿಗಳಾಗಿರುವ, ಯುವ ಪ್ರೇಮಿಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶ್ರೀಲಕ್ಷ್ಮಿ(20) ಹಾಗೂ ಅಭಿಜಿತ್‌ ಮೋಹನ್‌(24) ನೇಣಿಗೆ ಶರಣಾದ ಪ್ರೇಮಿಗಳು. ಇವರು ಕೇರಳದ ತ್ರಿಶೂರ್‌ ಜಿಲ್ಲೆಯ ಕುಂಡೂರಿನವರಾಗಿದ್ದಾರೆ. ಶ್ರೀಲಕ್ಷ್ಮಿ 6 ತಿಂಗಳಿಂದ ಹಾಗೂ ಅಭಿಜಿತ್‌ 1 ವರ್ಷದಿಂದ ಎಲೆಕ್ಟಾನಿಕ್‌ ಸಿಟಿಯಲ್ಲಿರುವ ಟಿಸಿಎಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎಲೆಕ್ಟಾನಿಕ್‌ ಸಿಟಿ ಸಮೀಪದ ಶಾಂತಿಪುರದ ಪಿಜಿಯಲ್ಲಿ ವಾಸವಿದ್ದರು.

ಶ್ರೀಲಕ್ಷ್ಮಿ ಮನೆಯವರಿಂದ ಇಬ್ಬರ ಪ್ರೀತಿಗೆ ವಿರೋಧ ಇತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಇದರಿಂದ ಬೇಸತ್ತು ಇಬ್ಬರೂ ಸಂಬಂಧಿಗಳ ಕಡೆಯ ಫೋನ್‌ ಸ್ವೀಕರಿಸುತ್ತಿರಲಿಲ್ಲ. ಉಳಿದುಕೊಂಡಿದ್ದ ಪಿಜಿಯಲ್ಲೂಇರಲಿಲ್ಲ. ಈ ಹಿನ್ನೆಲೆಯಲ್ಲಿ ಯುವತಿಯ ಕುಟುಂಬಸ್ಥರು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿಅ.14ರಂದು ದೂರು ದಾಖಲಿಸಿದ್ದರು.

ನ.28ರಂದು ಹೆಬ್ಬಗೋಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಚಿಂತಲ ಮಡಿವಾಳ ಗ್ರಾಮದ ಬಳಿಯ ಪೊದೆಯಲ್ಲಿ ಜೋಡಿಯೊಂದು ಮರಕ್ಕೆ ನೇಣು ಹಾಕಿಕೊಂಡಿರುವುದನ್ನು ಗಮನಿಸಿ ಗ್ರಾಮಸ್ಥರೊಬ್ಬರು ಹೆಬ್ಬಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳದಲ್ಲಿ ಗುರುತಿನ ಚೀಟಿ, ಸಂಬಂಧಿಗಳ ಮಾಹಿತಿ ಆದರಿಸಿ ಕರೆ ಮಾಡಿದಾಗ ಇಬ್ಬರೂ ಕೇರಳ ಮೂಲದವರೆಂದು ಗೊತ್ತಾಗಿದೆ. ಸಂಬಂಧಿಗಳು ಇಬ್ಬರ ಗುರುತನ್ನು ಪತ್ತೆ ಹಚ್ಚಿದ್ದಾರೆ.

Comments are closed.