ರಾಷ್ಟ್ರೀಯ

ಮದುವೆ ಕಾರ್ಯಕ್ರಮದಲ್ಲಿ 90 ಲಕ್ಷ ದುಡ್ಡು ಎಸೆದು ಸಂಭ್ರಮ

Pinterest LinkedIn Tumblr


ಗಾಂಧಿನಗರ: ಮದುವೆ ಕಾರ್ಯಕ್ರಮದಲ್ಲಿ ಬರೋಬ್ಬರಿ 90 ಲಕ್ಷ ರೂ. ಹಣ ಎಸೆದು ಸಂಭ್ರಮಿಸಿದ ಘಟನೆ ಗುಜರಾತಿನ ಜಾಮ್‍ನಗರದಲ್ಲಿ ನಡೆದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನವೆಂಬರ್ 30ರಂದು ವರ ಮದುವೆಮನೆಗೆ ಮೆರವಣಿಗೆ ಮೂಲಕ ಹೋಗುತ್ತಿದ್ದನು. ಈ ವೇಳೆ ವರನ ಕುಟುಂಬಸ್ಥರು ಹಾಗೂ ಸಂಬಂಧಿಕರು ರಸ್ತೆಯುದ್ದಕ್ಕೂ ಹಣವನ್ನು ಎಸೆಯುವ ಮೂಲಕ ಡ್ಯಾನ್ಸ್ ಮಾಡುತ್ತಾ ಸಂಭ್ರಮಿಸಿದ್ದಾರೆ. ಈ ಮದುವೆಯನ್ನು ಚೇಲಾ ಗ್ರಾಮದ ಜಡೇಜಾ ಕುಟುಂಸ್ಥರು ಆಯೋಜಿಸಿದ್ದರು ಎನ್ನಲಾಗಿದೆ.

ವರದಿಗಳ ಪ್ರಕಾರ ಮೆರವಣಿಗೆಯಲ್ಲಿ 90 ಲಕ್ಷ ರೂ. ಅನ್ನು ಎಸೆಯಲಾಗಿದೆ. ಇದರಲ್ಲಿ ಕೇವಲ 2 ಸಾವಿರ ಹಾಗೂ 500 ರೂ. ನೋಟುಗಳನ್ನು ಸುರಿಮಳೆ ಗೈದಿದ್ದಾರೆ. ಹಣ ಎಸೆದು ಸಂಭ್ರಮಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೆರವಣಿಗೆ ವೇಳೆ ಒಂದು ಹಣದ ಕಂತೆ ಖಾಲಿ ಆಗುತ್ತಿದ್ದಂತೆ ಮತ್ತೊಂದು ಹಣದ ಕಂತೆಯನ್ನು ತೆಗೆದು ಸುರಿಮಳೆ ಗೈದಿದ್ದಾರೆ. ನೋಟುಗಳನ್ನು ಎಸೆಯುತ್ತಿದ್ದ ಕಾರಣ ಅಲ್ಲಿದ್ದ ಜನರಿಗೆ ನೋಟಿನ ಮಳೆ ಆಗುತ್ತಿದೆ ಎಂದು ಎನಿಸುತ್ತಿತ್ತು. ಮೆರವಣಿಗೆ ಮುಂದೆ ಹೋದ ತಕ್ಷಣ ಸ್ಥಳೀಯರು ಕೆಳಗೆ ಬಿದ್ದಿದ್ದ ನೋಟುಗಳನ್ನು ಎತ್ತಿಕೊಂಡಿದ್ದಾರೆ.

ಮದುವೆಯಾದ ನಂತರ ವರ ವಧುವನ್ನು ಹೆಲಿಕಾಪ್ಟರ್ ಮೂಲಕ ಕುಂದಾದ್ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲದೆ ವರನ ಸಹೋದರ ಮದುವೆ ಉಡುಗೊರೆಯಾಗಿ ಒಂದು ಕೋಟಿ ಮೌಲ್ಯದ ಕಾರನ್ನು ಉಡುಗೊರೆ ಆಗಿ ನೀಡಿದ್ದಾರೆ ಎನ್ನಲಾಗುತ್ತಿದೆ.

Comments are closed.