ರಾಷ್ಟ್ರೀಯ

ಸರಳವಾಗಿ ವಿವಾಹವಾಗಿ ವಧುವನ್ನು ಸೈಕಲ್ ಮೇಲೆ ಮನೆಗೆ ಕರೆದುಕೊಂಡು ಬಂದ ಶ್ರೀಮಂತ ವರ

Pinterest LinkedIn Tumblr

ಶ್ರೀಮಂತ ಕುಟುಂಬದ ಹುಡುಗನೊಬ್ಬ ಸರಳ ವಿವಾಹವಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ. ಯಾವುದೇ ಬ್ಯಾಂಡ್, ಹಾಡು, ಅಬ್ಬರವಿಲ್ಲದೆ ಗುರುದ್ವಾರದಲ್ಲಿ ಸರಳವಾಗಿ ವಿವಾಹವಾಗಿ ವಧುವನ್ನು ಸೈಕಲ್ ಮೇಲೆ ಮನೆಗೆ ಕರೆದುಕೊಂಡು ಹೋಗಿದ್ದಾನೆ.

ಎಲ್ಲರನ್ನು ಗಮನ ಸೆಳೆದ ಮದುವೆ ಪಂಜಾಬ್ ನ ಬತಿಂಡಾ ಜಿಲ್ಲೆಯಲ್ಲಿ ನಡೆದಿದೆ. ರಾಮನಗರದ ನಿವಾಸಿ ಗುರ್ಬಕ್ಷಿಶ್ ಬಳಿ ಸುಮಾರು 40 ಎಕರೆ ಜಮೀನಿದೆ. ಕುಟುಂಬದ ಏಕೈಕ ಗಂಡು ಮಗ ಈತ. ಮಾಲಿನ್ಯದ ಬಗ್ಗೆ ಎಚ್ಚರಿಕೆ ನೀಡಲು ಹಾಗೂ ಸರಳ ವಿವಾಹದ ಬಗ್ಗೆ ಸಮಾಜಕ್ಕೆ ಸಂದೇಶ ಸಾರಲು ಗುರ್ಬಕ್ಷಿಶ್ ಈ ರೀತಿ ಮದುವೆಯಾಗಿದ್ದಾನೆ. ಈತನ ಮದುವೆಗೆ ಕೇವಲ 15 ಮಂದಿ ಬಂದಿದ್ದರು ಎನ್ನಲಾಗಿದೆ.

ವರನ ಸಹೋದರಿಗೆ ಬಾಲ್ಯದಿಂದಲೂ ಈ ಕನಸಿತ್ತಂತೆ. ತನ್ನ ಸಹೋದರ ಸರಳವಾಗಿ ಹಾಗೂ ವಧು ಕಡೆಯವರಿಗೆ ಹೊರೆಯಾಗದೆ ಮದುವೆಯಾಗ್ಬೇಕು ಎಂದು ಕನಸು ಕಂಡಿದ್ದಳಂತೆ. ಅದರಂತೆ ನಾನು ಮದುವೆಯಾಗಿದ್ದೇನೆ. ನನಗೆ ಇದು ಖುಷಿ ನೀಡಿದೆ ಎಂದು ವರ ಹೇಳಿದ್ದಾನೆ. ಮದುವೆಯಾದ್ಮೇಲೆ ವಧುವನ್ನು ಸೈಕಲ್ ನಲ್ಲಿ ಕೂರಿಸಿಕೊಂಡು 25 ಕಿಲೋಮೀಟರ್ ಚಲಿಸಿದ್ದಾನೆ ವರ.

Comments are closed.