ಕರ್ನಾಟಕ

ಕೌಟುಂಬಿಕ ಕಲಹ: ಹೆಂಡತಿಯನ್ನು ಕೊಚ್ಚಿ ಕೊಲೆಗೈದ

Pinterest LinkedIn Tumblr


ಬಳ್ಳಾರಿ: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತ್ನಿಯ ಕತ್ತುವಿಗೆ ಕುಡುಗೋಲಿಂದ ಕೊಚ್ಚಿ ಕೊಲೆಗೈದ ಹೃದಯ ವಿದ್ರಾವಕ ಘಟನೆ ಯೊಂದು ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ಗುರುವಾರ ಬೆಳಗಿನಜಾವ ನಡೆದಿದೆ.

ಗ್ರಾಮದ ನೀಲಮ್ಮ(20) ಕೊಲೆಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ. ಚಂದ್ರಶೇಖರ (26) ಕೊಲೆಮಾಡಿದ ಪತಿ.

ಹೊಲಕ್ಕೆ ಹೋಗು ಅಂತ ಪತ್ನಿ ಹೇಳಿದಾಗ ಕೋಪಿತಗೊಂಡ ಪತಿರಾಯ ಮನೆಯಲ್ಲಿದ್ದ ಕುಡುಗೋಲಿಂದ ಕೊಚ್ಚಿ ಕೊಲೆಗೈದಿ ದ್ದಾನೆ. ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ‌‌ ಶ್ರೀನಿವಾಸ ಮನ್ನೆ ಹಾಗೂ ಪಿಎಸ್ ಐ ವೈ.ಎಸ್.ಹನುಮಂತಪ್ಪ ನೇತೃತ್ವದ ಸಿಬ್ಬಂದಿ ತಾಲೂಕಿನ ಇಬ್ರಾಹಿಂಪುರ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲಿಸಿ ಕೊಲೆಗೈದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲಿ ದೂರು ದಾಖಲಾಗಿದೆ.

Comments are closed.