ರಾಷ್ಟ್ರೀಯ

ಡಿ.1ರಿಂದ ಎಲ್ಲಾ ಟೆಲಿಕಾಂ ಕಂಪನಿಗಳ ಸುಂಕ ಯೋಜನೆಯಲ್ಲಿ ಹೆಚ್ಚಳ

Pinterest LinkedIn Tumblr

ದೆಹಲಿ : ಟ್ರಾಯ್ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಗ್ರಾಹಕರಿಗೆ ನೆಮ್ಮದಿ ನೀಡಲಿದೆ, ಡಿಸೆಂಬರ್ 1ರಿಂದ ಯೋಜನೆ ಬೆಲೆ ಏರಿಕೆಯಾಗಲ್ಲ ಎಂಬ ನಿರೀಕ್ಷೆಯಲ್ಲಿದ್ರೆ ಅದು ಸುಳ್ಳು. ಟ್ರಾಯ್, ಕನಿಷ್ಠ ಸುಂಕ ಯೋಜನೆ ನಿಗದಿಪಡಿಸಲು ನಿರಾಕರಿಸಿದೆ.

ಟೆಲಿಕಾಂ ಇಲಾಖೆ ಕನಿಷ್ಠ ಸುಂಕ ಯೋಜನೆ ಬಗ್ಗೆ ಚರ್ಚಿಸುತ್ತಿಲ್ಲ ಎಂದು ಟ್ರಾಯ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಜಿಯೋ, ಏರ್‌ಟೆಲ್, ವೊಡಾಫೋನ್-ಐಡಿಯಾ ಮತ್ತು ಬಿಎಸ್‌ಎನ್‌ಎಲ್ ಸುಂಕ ಯೋಜನೆಯಲ್ಲಿ ಹೆಚ್ಚಳ ಮಾಡಲಿದ್ದು, ಮಧ್ಯಪ್ರವೇಶಿಸುವುದಿಲ್ಲ ಎಂದು ಟ್ರಾಯ್ ಹೇಳಿದೆ. ತಜ್ಞರ ಪ್ರಕಾರ, ವೊಡಾಫೋನ್-ಐಡಿಯಾ ಮತ್ತು ಏರ್‌ಟೆಲ್‌ನ ಯೋಜನೆಗಳು ಶೇಕಡಾ 35ರಷ್ಟು ದುಬಾರಿಯಾಗಲಿವೆ.

ಇನ್ನು ಮೊಬೈಲ್ ಸೇವಾ ದರಗಳಲ್ಲಿನ ಇಳಿಕೆಯಿಂದಾಗಿ ಟೆಲಿಕಾಂ ಕ್ಷೇತ್ರದ ಆದಾಯವು ಮೂರು ವರ್ಷಗಳಲ್ಲಿ ಸುಮಾರು 41 ಸಾವಿರ ಕೋಟಿಗಳಷ್ಟು ಕಡಿಮೆಯಾಗಿದೆ ಎಂದು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಸಂಸತ್ತಿನಲ್ಲಿ ಬುಧವಾರ ಹೇಳಿದ್ದಾರೆ.

ಟೆಲಿಕಾಂ ಕ್ಷೇತ್ರದ ಒಟ್ಟು ಆದಾಯವು 2016-17ರಲ್ಲಿ 2.65 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಇದು ಒಂದು ವರ್ಷದ ನಂತರ 2.46 ಲಕ್ಷ ಕೋಟಿ ರೂಪಾಯಿಗೆ ಮತ್ತು 2018-19ರಲ್ಲಿ 2.24 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ ಎಂದವರು ಹೇಳಿದ್ದಾರೆ.

Comments are closed.