ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹೆಸರಿಟ್ಟುಕೊಂಡಿದ್ದ ರೈತನಿಗೆ ಹೆಸ್ರು ದುಬಾರಿಯಾಗಿ ಪರಿಣಮಿಸಿದೆ. ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಖಾತೆಗೆ ಬಂದ ಹಣವೆಲ್ಲ ವಾಪಸ್ ಹೋಗಿದೆ. ಕೊನೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸತ್ಯ ಬಯಲಿಗೆಳೆದಿದ್ದಾರೆ.
ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಬಂದ ಅರ್ಜಿ ತಹಶೀಲ್ದಾರ್ ಬಳಿ ಹೋಗಿದೆ. ಆಗ ಅಮಿತಾಬ್ ಬಚ್ಚನ್ ಹೆಸರು ನೋಡಿ ಅನುಮಾನ ವ್ಯಕ್ತವಾಗಿದೆ. ಅಮಿತಾಬ್ ಬಚ್ಚನ್ ಖಾತೆಗೆ ಬಂದ ಹಣವನ್ನು ವಾಪಸ್ ಕಳುಹಿಸಲಾಗಿದೆ. ಪರಿಶೀಲನೆ ನಡೆಸಿದಾಗ ಫೋನ್ ನಂಬರ್ ಹಾಗೂ ಆಧಾರ್ ಕಾರ್ಡ್ ಕೂಡ ಇದೇ ಹೆಸರಿನಲ್ಲಿ ಇತ್ತು.
ಸರಿಯಾಗಿ ಪರಿಶೀಲನೆ ನಡೆಸಿದಾಗ ಸತ್ಯ ಗೊತ್ತಾಗಿದೆ. ಅಮಿತಾಬ್ ಬಚ್ಚನ್ ರೈತನೊಬ್ಬನ ಹೆಸರು. ಆತ ಸೌದಿ ಅರೇಬಿಯಾದಲ್ಲಿ ಮೊದಲು ಕೆಲಸ ಮಾಡ್ತಿದ್ದ ಎಂಬುದು ಗೊತ್ತಾಗಿದೆ. ಎಲ್ಲ ದಾಖಲೆಗಳು ಸರಿಯಿದ್ದು, ಹಣ ಖಾತೆಗೆ ವಾಪಸ್ ಆಗಲಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.