ಆಂಧ್ರಪ್ರದೇಶ : ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕು ಎಂಬುದು ಅನೇಕರ ಆಸೆ. ಜೊತೆಗೆ ಹರಕೆ ಕೂಡ. ಆದ್ರೇ ದರ್ಶನ ಬೇಗ ಆಗದೇ ಒಂದು ಎರಡು ದಿನ, ಕೆಲವೊಮ್ಮೆ ವಿಶೇಷ ದಿನಗಳಲ್ಲಿ ಮೂರು ನಾಲ್ಕು ದಿನಗಳು ಕ್ಯೂ ನಲ್ಲಿ ನಿಂತು ಕಾಯಬೇಕಿತ್ತು. ಆದ್ರೇ ಇದೀಗ ಹಿರಿಯ ನಾಗರೀಕರಿಗೆ ಇದರಿಂದ ಮುಕ್ತಿ ದೊರೆತಿದೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಹಿರಿಯ ನಾಗರೀಕರಿಗಾಗಿ ಉಚಿತ ಅವಕಾಶ ಕಲ್ಪಿಸಿದೆ.
ಹೌದು.. ತಿರುಪತಿ ತಿಮ್ಮಪ್ಪನ ದರ್ಶನವನ್ನು ಪಡೆಯಬೇಕೆಂದರೇ ಎರಡು ಮೂರು ದಿನಗಳ ಕಾಯಬೇಕಿತ್ತು. ಇದಲ್ಲದೇ ಎರಡು ಹಂತಗಳಲ್ಲಿ ಕೂಡ ವಿಶೇಷ ದರ್ಶನಕ್ಕೆ ಅವಕಾಶ ಮಾಡಲಾಗಿತ್ತಾದರೂ, ಅದು ಕಷ್ಟದ ಕೆಲಸ ಕೂಡ ಆಗಿತ್ತು.
ಆದ್ರೇ ಇದೀಗ ಹಿರಿಯ ನಾಗರೀಕರ ಕಷ್ಟಕ್ಕೆ ಸ್ಪಂದಿಸಿರುವ ದೇವಾಲಯದ ಆಡಳಿತ ಮಂಡಳಿ, ಹಿರಿಯ ನಾಗರೀಕರಿಗೆ ತಿರುಪತಿ ತಿಮ್ಮಪ್ಪನ ಉಚಿತ ದರ್ಶನ ಪಡೆಯುವಂತ ಅವಕಾಶವನ್ನು ಕಲ್ಪಿಸಿದೆ. ಅಲ್ಲದೇ ಮೆಟ್ಟಿಲು ಹತ್ತಿ ದರ್ಶನ ಪಡೆಯುವ ಅಗತ್ಯವಿಲ್ಲ. ಇದರ ಬದಲಾಗಿ ಬ್ರಿಡ್ಜ್ ಸಮೀಪದಲ್ಲಿರುವ ಎಸ್ 1 ಕೌಂಟರ್ ಗೆ ತೆರಳಿ, ಹಿರಿಯ ನಾಗರೀಕರ ಗುರತಿನ ಚೀಟಿ ನೀಡಬೇಕು. ಅಲ್ಲಿಂದ ಹಿರಿಯ ನಾಗರೀಕರಿಗೆ ವಿಶೇಷ ದರ್ಶನಕ್ಕೆ ಅವಕಾಶ ಮಾಡಿಕೊಡಲಿದ್ದಾರೆ.
ಇನ್ನೂ ಇದಷ್ಟೇ ಅಲ್ಲದೇ ಹಿರಿಯ ನಾಗರೀಕರು ಸರದಿ ಸಾಲಿನಲ್ಲಿ ನಿಂತ ಸಾಗಲು ಆಗದೇ ಇರುವ ಕಾರಣ, ಕುಳಿತುಕೊಂಡು ವಿಶ್ರಾಂತಿ ಪಡೆದು ದೇವರ ದರ್ಶನ ಪಡೆಯಲು ಅವಕಾಶ ಮಾಡಲಾಗಿದೆ. ಜೊತೆಗೆ ನೀವು ಕುಳಿತುರವ ಜಾಗಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ. ದೇವರ ದರ್ಶನ ಪಡೆದು ಹೊರಗೆ ಬಂದ್ರೇ, ರೂ.20 ನೀಡಿದರೇ ದೇವರ ಪ್ರಸಾದವಾಗಿ ಎರಡು ಲಡ್ಡು ನೀಡಲಾಗುತ್ತದೆ. ಹೆಚ್ಚಿನ ಲಡ್ಡು ಬೇಕೆಂದ್ರೇ, ರೂ.25 ಹಣ ನೀಡಿ ಖರೀದಿಸಬೇಕಾಗುತ್ತದೆ. ಈ ಮೂಲಕ ಕೇವಲ 30 ನಿಮಿಷದಲ್ಲಿಯೇ ತಿರುಪತಿ ತಿಮ್ಮಪ್ಪನ ದರ್ಶನ ಹಿರಿಯ ನಾಗರೀಕರಿಗೆ ಉಚಿತವಾಗಿ ದೊರೆಯಲಿದೆ.

Comments are closed.