ಮನೋರಂಜನೆ

ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಹಿಂದಿಯಲ್ಲಿ ಮಾತನಾಡಿ ಎಂದವನಿಗೆ ತಾಪ್ಸಿಯ ಖಡಕ್ ಪ್ರತಿಕ್ರಿಯೆ

Pinterest LinkedIn Tumblr


ಪಣಜಿ: ಬಹುಭಾಷಾ ನಟಿ ತಾಪ್ಸಿ ಪನ್ನು ಹಿಂದಿಯಲ್ಲಿ ಮಾತನಾಡಿ ಎಂದ ವ್ಯಕ್ತಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದು, ಅವರ ಉತ್ತರ ಕೇಳಿ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ.

ಇತ್ತೀಚೆಗೆ ತಾಪ್ಸಿ ಗೋವಾದಲ್ಲಿ ನಡೆದ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ತಾಪ್ಸಿ ಪ್ರೇಕ್ಷಕರ ಜೊತೆ ಇಂಗ್ಲಿಷ್ ಭಾಷೆಯಲ್ಲಿ ಸಂವಾದ ನಡೆಸುತ್ತಿರುತ್ತಾರೆ. ಈ ವೇಳೆ ವ್ಯಕ್ತಿಯೊಬ್ಬರು ಎದ್ದು ನಿಂತು ನೀವು ಹಿಂದಿ ಚಿತ್ರದ ನಟಿ. ನೀವು ಹಿಂದಿಯಲ್ಲಿ ಮಾತನಾಡಿ ಎಂದು ಹೇಳಿದ್ದಾರೆ.

ವ್ಯಕ್ತಿ ಮಾತನ್ನು ಕೇಳಿದ ತಾಪ್ಸಿ, ಸರ್. ನಾನು ಈ ಇಡೀ ಕಾರ್ಯಕ್ರಮದಲ್ಲಿ ಹಿಂದಿಯಲ್ಲಿ ಮಾತನಾಡುತ್ತೇನೆ. ಆದರೆ ಇಲ್ಲಿರುವ ಎಲ್ಲರಿಗೂ ಹಿಂದಿ ಅರ್ಥವಾಗುತ್ತಾ ಎಂದು ಮರು ಪ್ರಶ್ನಿಸಿದ್ದಾರೆ. ಅದಕ್ಕೆ ಅಲ್ಲಿದ್ದ ಪ್ರೇಕ್ಷಕರು ಇಲ್ಲ ಎಂದು ಉತ್ತರಿಸಿದ್ದಾರೆ. ಬಳಿಕ ತಾಪ್ಸಿ ನಾನು ದಕ್ಷಿಣ ಭಾರತದ ನಟಿ ಕೂಡ. ಹಾಗಂತ ನಾನು ತಮಿಳು ಹಾಗೂ ತೆಲುಗು ಭಾಷೆಯಲ್ಲೂ ಮಾತನಾಡಬೇಕೇ ಎಂದು ಕೇಳಿದ್ದಾರೆ.

ತಾಪ್ಸಿ ಅವರು ಈ ರೀತಿ ಖಡಕ್ಕಾಗಿ ಪ್ರತಿಕ್ರಿಯೆ ನೀಡುತ್ತಿದ್ದಂತೆ ಅಲ್ಲಿದ್ದ ಜನರು ಜೋರಾಗಿ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ತಾಪ್ಸಿ ಅವರು ನೀಡಿದ ಖಡಕ್ ಉತ್ತರದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

Comments are closed.