ರಾಷ್ಟ್ರೀಯ

ಅಯೋಧ್ಯ ಗೋಶಾಲೆಗಳಲ್ಲಿನ ಹಸುಗಳಿಗಾಗಿ ಸೆಣಬಿನ ಕೋಟು ಅನುಷ್ಠಾನಕ್ಕೆನಿರ್ಧಾರ

Pinterest LinkedIn Tumblr

ಅಯೋಧ್ಯಾ: ಹಸುಗಳನ್ನು ಚಳಿಯಿಂದ ರಕ್ಷಿಸಲು ಅಯೋಧ್ಯಾ ಮಹಾನಗರ ಪಾಲಿಕೆ ಹೊಸವಿಧಾನವನ್ನು ಕಂಡುಕೊಂಡಿದ್ದು ಶೀಘ್ರವೇ ಅನುಷ್ಠಾನಕ್ಕೆ ತರಲು ನಿರ್ಧರಿಸಿದೆ.

ಅಯೋಧ್ಯಾ ನಗರಾದ್ಯಂತ ಇರುವ ಎಲ್ಲ ಗೋಶಾಲೆಗಳಲ್ಲಿನ ಹಸುಗಳಿಗಾಗಿ ಸೆಣಬಿನ ಕೋಟು ಖರೀದಿ ಮಾಡಿ, ಜಾನುವಾರುಗಳನ್ನು ಬೆಚ್ಚಗೆ ಇಡಲು ತೀರ್ಮಾನಿಸಿದೆ.

ಈ ಬಗ್ಗೆ ಅಯೋಧ್ಯಾ ನಗರ ನಿಗಮ ಆಯುಕ್ತ ನಿರಾಜ್ ಶುಕ್ಲಾ ಮಾತನಾಡಿದ್ದು, ಹಸುಗಳಿಗೆಂದೇ ಸೆಣಬಿನ ಕೋಟು ತಯಾರಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದೇವೆ. ಈ ಯೋಜನೆ ಮೂರರಿಂದ ನಾಲ್ಕು ಹಂತದಲ್ಲಿ ಅನುಷ್ಠಾನಕ್ಕೆ ಬರುತ್ತದೆ.

ಮೊದಲನೇದಾಗಿ ಬೈಶಿಂಗ್​ಪುರ ಗೋಶಾಲೆಯಿಂದಲೇ ಪ್ರಾರಂಭಮಾಡುತ್ತೇವೆ. ಅದರಲ್ಲಿ ಎತ್ತುಗಳೂ ಸೇರಿ 1200 ಹಸುಗಳು ಇವೆ. ಪ್ರಾರಂಭದಲ್ಲಿ 100 ಕರುಗಳಿಗಾಗಿ ಕೋಟು ತರಿಸುತ್ತಿದ್ದೇವೆ. ಈ ಕೋಟುಗಳು ನವೆಂಬರ್​ ಕೊನೆಯಲ್ಲಿ ನಮಗೆ ತಲುಪಲಿದ್ದು ಪ್ರತಿ ಕೋಟಿಗೂ 250-300 ರೂಪಾಯಿ ಇದೆ ಎಂದು ತಿಳಿಸಿದ್ದಾರೆ.

ಕರುಗಳಿಗಾಗಿ ಮೂರು ಪದರಗಳುಳ್ಳ ಕೋಟುಗಳು ಸಿದ್ಧವಾಗುತ್ತಿವೆ. ಇವುಗಳಿಗೆ ಸೆಣಬಿನ ಬದಲು ಮೆತ್ತನೆಯ ಬಟ್ಟೆಯಲ್ಲಿ ತಯಾರಿಸಲು ಹೇಳಿದ್ದೇವೆ ಎಂದು ಆಯುಕ್ತರು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಗೋಶಾಲೆಗಳಲ್ಲಿ ಸಣ್ಣ ಪ್ರಮಾಣದ ಬೆಂಕಿ ಉರಿಯುವಂತೆ ವ್ಯವಸ್ಥೆ ಮಾಡಲು ಹಾಗೂ ನೆಲಕ್ಕೆಲ್ಲ ಒಣಹುಲ್ಲಿನ ಹಾಸು ಹಾಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಚಳಿಯಿಂದ ಹಸುಗಳನ್ನು ರಕ್ಷಿಸುವುದು ನಮ್ಮ ಮುಖ್ಯ ಉದ್ದೇಶ ಎಂದಿದ್ದಾರೆ.

Comments are closed.