
ನ್ಯೂಯಾರ್ಕ್: ಹಣಗಳಿಸಬೇಕೆಂದು ಯೋಚಿಸುತ್ತಿದ್ದೀರಾ! ನೀವು ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತರೇ ? ಹಾಗಾದರೆ ಸಾಫ್ಟ್ ವೇರ್ ದೈತ್ಯ ಗೂಗಲ್ ಹೊಸ ಆಫರ್ ಒಂದನ್ನು ನೀಡಿದೆ. ಅದರಲ್ಲಿ ನೀವು ಸಫಲರಾದರೇ 10.76 ಕೋಟಿ ಗಳಿಸಬಹುದು.
ಆಶ್ಚರ್ಯವಾದರೂ ಸತ್ಯ , ಗೂಗಲ್ ತಂತ್ರಜ್ಙಾನ ಕ್ಷೇತ್ರದಲ್ಲಿ ಭಾರೀ ಪ್ರಭುತ್ವ ಸಾಧಿಸಿದೆ. ಇದಕ್ಕೆ ಪೈಪೋಟಿ ನೀಡಬೇಕೆಂದು ಹಲವು ಸಂಸ್ಥೆಗಳೂ ಮುಂದಾದರೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಿಲ್ಲ. ಈಗ ಗೂಗಲ್ ಹೊಸ ಪ್ರಕಟನೆಯೊಂದನ್ನು ಹೊರಡಿಸಿದ್ದು ಮೇಲ್ನೋಟಕ್ಕೆ ಸುಲಭವಾದ ಕೆಲಸ ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪಾಗಬಹುದು.
ಸವಾಲೇನು ?
ಗೂಗಲ್ ಹಲವಾರು ವರುಷಗಳಿಂದ ಮೊಬೈಲ್ ಗಳನ್ನುತಯಾರಿಸುತ್ತಿರುವ ವಿಚಾರ ತಿಳಿದೆ ಇದೆ. ಅದರಲ್ಲಿ ಗೂಗಲ್ ಪಿಕ್ಸೆಲ್ ಸರಣಿಯ ಫೋನ್ ಗಳು ಬಹಳ ಜನಪ್ರಿಯತೇ ಗಳಿಸಿಕೊಂಡಿದೆ. ಇದೀಗ ಈ ಫೋನ್ ಮೇಲೆ ಹ್ಯಾಕರ್ ಗಳನ್ನು ಕಣ್ಣು ಬಿದ್ದಿದ್ದು ಗೂಗಲ್ ಸುರಕ್ಷತೆ ವಹಿಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಬಳಕೆದಾರರ ಮಾಹಿತಿ ಸುರಕ್ಷತೆ ಮೊಬೈಲ್ ಮತ್ತು ಆ್ಯಪ್ ಕಂಪೆನಿಗನ್ನು ಮೇಲೆರಿಸುವ ಬಹುದೊಡ್ಡ ಹೊಣೆಗಾರಿಕೆ ಯನ್ನು ಸಮರ್ಥವಾಗಿ ನಿಭಾಯಿಸಲು ಮುಂದಾಗಿದೆ.
ಅದ್ದರಿಂದ ಬಗ್ ಬೌಂಟಿ ಕಾರ್ಯಕ್ರಮದಡಿ ಸೆಕ್ಯೂರಿಟಿ ರಿಸರ್ಚರ್ ಗಳಿಗೆ ಸವಾಲನ್ನು ಒಡ್ಡಿದೆ. ಯಾವುದಾದರೂ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಗೂಗಲ್ ಗೆ ಮಾಹಿತಿ ನೀಡಿದ್ದಲ್ಲಿ ಸುಮಾರು 1.5 ಮಿಲಿಯನ್ ಡಾಲರನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಹಿಂದೆ 38 ಸಾವಿರ ಡಾಲರ್ (27 ಲಕ್ಷ ರೂ ) ಬಹುಮಾನ ಘೋಷಿಸಲಾಗಿತ್ತು.
Comments are closed.