
ರಾಮನಗರ: ಚನ್ನಪಟ್ಟಣದ ತಿಟ್ಟಮಾರನಹಳ್ಳಿಯ ಚೇತನ ಸಮುದಾಯ ಭವನದಲ್ಲಿ ಮದುವೆ ನಡೆಯಬೇಕಿದ್ದು, ಅನಾಮಧೇಯ ಪೋನ್ ಕಾಲ್‌ನಿಂದ ಮದುವೆ ಮುರಿದು ಬಿದ್ದಿದೆ.
ನಗರದ ಎಲೆಕೇರಿ ಬಡಾವಣೆಯ ವಧು ಜೊತೆ ಎಲೀಯೂರು ಗ್ರಾಮದ ಬಸವರಾಜುಗೆ ಮದುವೆ ಫಿಕ್ಸ್ ಆಗಿತ್ತು. 6 ತಿಂಗಳ ಹಿಂದೆಯೇ ನಿಶ್ಚಿತಾರ್ಥ ಕೂಡ ನಡೆದಿತ್ತು. ಆದ್ರೆ ನಿನ್ನೆ ತನಕ ಗೊತ್ತಾಗದ ಸತ್ಯವೊಂದು ನಿನ್ನೆ ರಿಸೆಪ್ಷನ್‌ಗೂ ಮುನ್ನ ತಿಳಿದಿದ್ದು, ಎಷ್ಟು ಸತ್ಯವೋ ಸುಳ್ಳೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಹೆಣ್ಣಿನ ಮನೆಯವರಿಗೆ ಅಪರಿಚಿತನೊಬ್ಬ ಕಾಲ್ ಮಾಡಿ, ವರನಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಇದು ಮರುಮದುವೆ ಎಂದು ಹೇಳಿದ್ದಾನೆ. ಈ ಕಾರಣಕ್ಕೆ ನಿನ್ನೆ ರಾತ್ರಿಯೆಲ್ಲ ನಗರದ ಪೋರ್ವ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ ನಡೆದಿದೆ. ಆರೋಪ ಸಾಬೀತಿಗೆ ವರ ಬಸವರಾಜ್ ಪಟ್ಟು ಹಿಡಿದಿದ್ದು, ಮದುವೆ ಕ್ಯಾನ್ಸಲ್ ಮಾಡಲಾಯಿತು.
ಇನ್ನು ಈ ಬಗ್ಗೆ ಪೋರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಫೋನ್‌ನಲ್ಲಿ ಆರೋಪ ಮಾಡಿದ ವ್ಯಕ್ತಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಮದುವೆ ಮುರಿದು ಬಿದ್ದ ಹಿನ್ನೆಲೆ, ಎಲೆಕೇರಿ ಗ್ರಾಮದ ಆನಂದ್ ವಧುಗೆ ಬಾಳು ಕೊಡಲು ಮುಂದೆ ಬಂದಿದ್ದು, ಇಬ್ಬರ ಮದುವೆಗೆ ಹಿರಿಯರು ಒಪ್ಪಿ ಆಶೀರ್ವದಿಸಿದ್ದು, ವಿವಾಹವಾಗಿದ್ದಾರೆ.
Comments are closed.