ಮನೋರಂಜನೆ

15 ವರ್ಷಗಳ ಬಳಿಕ ಬಾಲಿವುಡ್‌ನಲ್ಲಿ ಬಣ್ಣ ಹಚ್ಚುತ್ತಿರುವ ತೆಲುಗು ಸ್ಟಾರ್‌ ನಾಗಾರ್ಜುನ

Pinterest LinkedIn Tumblr


ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ನಟನೆಯ ಬಾಲಿವುಡ್‌ನ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ತೆಲುಗು ಸ್ಟಾರ್‌ ನಾಗಾರ್ಜುನ ಅವರು ಪುರಾತತ್ವಶಾಸ್ತ್ರಜ್ಞರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಅವರು ಸತತ 15 ವರ್ಷಗಳ ಬಳಿಕ ಮತ್ತೆ ಬಾಲಿವುಡ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಅಯಾನ್‌ ಮುಖರ್ಜಿ ನಿರ್ದೇಶನದ ಈ ಸಿನಿಮಾದಲ್ಲಿ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಕೂಡ ಇದ್ದಾರೆ. ನಾಗಾರ್ಜುನ ಮತ್ತು ಅಮಿತಾಭ್‌ ಬಚ್ಚನ್‌ ಈ ಮೊದಲು ‘ಅಗ್ನಿವರ್ಷ’ ಮತ್ತು ‘ಖುದಾ ಗವಾಹ್‌’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಫ್ಯಾಂಟಸಿ ಆ್ಯಕ್ಷನ್‌ ಮತ್ತು ಅಡ್ವೆಂಚರ್‌ ಸಿನಿಮಾವಾಗಿರುವ ‘ಬ್ರಹ್ಮಾಸ್ತ್ರ’ದಲ್ಲಿ ನಾಗಾರ್ಜುನ ಅವರ ಪಾತ್ರವನ್ನು ಕಾಶಿ ವಿಶ್ವನಾಥ ದೇವಸ್ಥಾನ, ಚೆಟ್‌ ಸಿಂಗ್‌ ಕೋಟೆ ಮತ್ತು ಗಂಗಾ ತೀರದಲ್ಲಿ ಚಿತ್ರೀಕರಿಸಲಾಗುವುದು ಎಂದು ಈ ಸಿನಿಮಾದ ಮೂಲಗಳು ತಿಳಿಸಿವೆ.

ನಾಗಾರ್ಜುನ ಪಾತ್ರವೂ ಅತ್ಯಂತ ಮಹತ್ವದ್ದಾಗಿರುವ ಈ ಸಿನಿಮಾದಲ್ಲಿಮೈ ನವಿರೇಳಿಸುವ ಸಾಹಸ ದೃಶ್ಯಗಳೂ ಇವೆಯೆಂದು ಹೇಳಲಾಗುತ್ತಿದೆ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ನಾಯಕ – ನಾಯಕಿಯಾಗಿ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಸಿನಿಮಾದ ವಿಶೇಷ.

ಬ್ರಹ್ಮಾಸ್ತ್ರ ಚಿತ್ರವನ್ನು ಆಯಾನ್ ಮುಖರ್ಜಿ ನಿರ್ದೇಶಿಸುತ್ತಿದ್ದು, ಕರಣ್ ಜೋಹರ್ ನಿರ್ಮಿಸುತ್ತಿದ್ದಾರೆ. ಅಲ್ಲದೆ, ಬಾಲಿವುಡ್ ಸ್ಟಾರ್‌ಗಳಾದ ಅಮಿತಾಬ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್, ಡಿಂಪಲ್ ಕಪಾಡಿಯಾ, ದಿವ್ಯೇಂದು ಶರ್ಮಾ ಹಾಗೂ ಮೌನಿ ರಾಯ್ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.

Comments are closed.