ರಾಷ್ಟ್ರೀಯ

ಮಗು ಕುರಿತು ಪ್ರಶ್ನೆ- ಡೇಟ್ ಹೇಳಿ ಬಾಯಿ ಮುಚ್ಚಿಸಿದ ಸಮಂತಾ

Pinterest LinkedIn Tumblr


ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಜಾಣತನದ ಉತ್ತರ ನೀಡಿದ್ದಾರೆ.

ಮಂಗಳವಾರ ಸಮಂತಾ ತಮ್ಮ ಇನ್‍ಸ್ಟಾ ಸ್ಟೋರಿಯಲ್ಲಿ ನನಗೆ ಪ್ರಶ್ನೆ ಕೇಳಿ ಎಂದು ಪೋಸ್ಟ್ ಮಾಡಿಕೊಂಡರು. ಇದನ್ನು ನೋಡಿದ ಅಭಿಮಾನಿಗಳು ಸಮಂತಾ ಅವರನ್ನು ಪ್ರಶ್ನಿಸಲು ಶುರು ಮಾಡಿದರು. ಈ ವೇಳೆ ಹಲವರು ಸಮಂತಾ ಅವರಿಗೆ ಪ್ರೆಗ್ನೆನ್ಸಿ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಸಮಂತಾ ಒಬ್ಬ ಅಭಿಮಾನಿಯ ಪ್ರಶ್ನೆಗೆ ಉತ್ತರಿಸುವ ಮೂಲಕ ಉಳಿದ ಅಭಿಮಾನಿಗಳ ಬಾಯಿ ಮುಚ್ಚಿಸಿದ್ದಾರೆ.

ಇನ್‍ಸ್ಟಾದಲ್ಲಿ ಅಭಿಮಾನಿಯೊಬ್ಬರು, “ನಿಮಗೆ ಮಗು ಯಾವಾಗ ಜನಿಸುತ್ತದೆ” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಮಂತಾ, “ನನ್ನ ದೇಹದ ಕಾರ್ಯವೈಖರಿಯಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ನಾನು 2020ರ ಆಗಸ್ಟ್ 7ರಂದು ಬೆಳಗ್ಗೆ 7 ಗಂಟೆಗೆ ಮಗುವನ್ನು ಪಡೆಯುತ್ತಿದ್ದೇನೆ ಎಂದು ಜಾಣತನದ ಉತ್ತರ ನೀಡಿದ್ದಾರೆ. ಸಮಂತಾ ಅವರ ಈ ಉತ್ತರ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ಸಮಂತಾ ಗರ್ಭಿಣಿಯಾ ಎಂದು ಪ್ರಶ್ನಿಸಿ ತೆಲುಗು ವೈಬ್‍ಸೈಟ್ ನಲ್ಲಿ ನಟಿಯ ಟ್ವಿಟ್ಟರಿಗೆ ಟ್ಯಾಗ್ ಮಾಡಿತ್ತು. ಈ ಪ್ರಶ್ನೆಗೆ ನಟಿ ಸಮಂತಾ ಅಕ್ಕಿನೇನಿ ಹಾಸ್ಯಾಸ್ಪದವಾಗಿ ಪ್ರತಿಕ್ರಿಯಿಸಿದ್ದರು. ತೆಲುಗು ವೆಬ್‍ಸೈಟ್, “ಸಮಂತಾ ಗರ್ಭಿಣಿಯಾ” ಎಂದು ಪ್ರಶ್ನಿಸಿ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿತ್ತು. ಈ ಟ್ವೀಟ್‍ಗೆ ಸಮಂತಾ, “ನಿಜವಾಗಿಯೂ ಹೌದಾ? ನಿಮಗೆ ಗೊತ್ತಾದರೆ ದಯವಿಟ್ಟು ನನಗೆ ತಿಳಿಸಿ” ಎಂದು ಹಾಸ್ಯವಾಗಿ ರೀ-ಟ್ವೀಟ್ ಮಾಡಿದ್ದರು.

ಸಮಂತಾ ಅವರು 2017, ಅಕ್ಟೋಬರ್ ತಿಂಗಳಲ್ಲಿ ನಟ ನಾಗಚೈತನ್ಯ ಅವರ ಜೊತೆ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಆಗಿದ್ದರು. ಮೊದಲು ಇಬ್ಬರು ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ನಂತರ ಕ್ರೈಸ್ತ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Comments are closed.