(file photo) ಬೆಳಗಾವಿ : ಟ್ರಾಫಿಕ್ ಪೊಲೀಸರ ಮೇಲೆ ವಾಹನ ಚಾಲಕನೊಬ್ಬ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಟ್ರಾಫಿಕ್ ಪೊಲೀಸರ ಜೊತೆಗೆ ವಾಹನ ಸವಾರ ಕಿರಿಕ್ ಮಾಡಿದ್ದಾನೆ. ಬಳಿಕ ಟ್ರಾಫಿಕ್ ಪೊಲೀಸರ ಮೇಲೆ ದರ್ಪ ಪ್ರದರ್ಶಿಸಿದ್ದಾರೆ.
ಈ ವ್ಯಕ್ತಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದು ಬರೋಬ್ಬರಿ 104 ಬಾರಿ!
ಸಂಚಾರ ವಿಭಾಗದ ಎಸಿಪಿ ಆರ್ ಆರ್ ಕಲ್ಯಾಣ ಶೆಟ್ಟಿ ಮೇಲೆ ಹಲ್ಲೆ ಮಾಡಲಾಗಿದ್ದು, ಹಲ್ಲೆ ಮಾಡಿದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಂಚಾರಿ ನಿಯಮಗಳ ಬದಲಾದ ಮೇಲೆ ಇಂತಹ ಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದು, ಕೆಲವೊಮ್ಮೆ ಪೊಲೀಸರಿಂದ ಇನ್ನೂ ಕೆಲವೊಮ್ಮೆ ವಾಹನ ಸವಾರರಿಂದ ತಪ್ಪುಗಳಾಗುತ್ತವೆ.
ದಾಖಲೆ ಪರಿಶೀಲನೆ ವೇಳೆ ಸಂಚಾರಿ ಪೊಲೀಸ್ ಎಸಿಪಿ ಮೇಲೆ ವಾಹನ ಸವಾರ ಹಲ್ಲೆ ನಡೆಸಿದ್ದಾನೆ. ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ದಾಖಲೆ ಪರಿಶೀಲನೆ ವೇಳೆ ಘಟನೆ ನಡೆದಿದೆ. ಮಹಾರಾಷ್ಟ್ರ ನೋಂದಣಿ ವಾಹನ ಚಾಲಕನಿಂದ ಎಸಿಪಿ ಮೇಲೆ ಹಲ್ಲೆ ನಡೆದಿದೆ.

Comments are closed.