ಕುಂದಾಪುರ: ಅಕ್ರಮ ಮರಳುಗಾರಿಕೆ ನಡೆಯದಂತೆ ಕ್ರಮಕೈಗೊಳ್ಳಬೇಕು ಎಂದು ಸಂಬಂದಪಟ್ಟ ಗಣಿ ಇಲಾಖಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗು ಸೂಚನೆ ನೀಡಿದ್ದು ಯಾವುದೇ ಅಕ್ರಮ ನಡೆಯಲು ಬಿಡೋದಿಲ್ಲ. ಮುಂದಿನ ೨-೩ ದಿನದಲ್ಲಿ ಮರಳು ಕನಿಷ್ಟ ದರದಲ್ಲಿ ಜನರಿಗೆ ಸಿಗುವ ಹಾಗೆ ಕ್ರಮಕೈಗೊಳ್ಳಲಾಗುತ್ತೆ ಎಂದು ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಹೇಳಿದ್ದಾರೆ.
ಅವರು ಕುಂದಾಪುರದ ತಲ್ಲೂರಿನಲ್ಲಿ ಭಾನುವಾರದಂದು ಮಾಧ್ಯಮದ ಜೊತೆ ಮಾತನಾಡಿದರು.

ಅಯೋಧ್ಯೆ ಪುರ ವಾಸಿ, ಧಶರಥ ಪುತ್ರ ಶ್ರೀರಾಮನೇ ನಮ್ಮ ದೇವರು. ಹೆಸರಲ್ಲೇ ಅಯೋಧ್ಯೆ ಇರುವ ಶ್ರೀರಾಮಚಂದ್ರನ ಪರ ತೀರ್ಪು ಜನರೆಲರೂ ಸ್ವಾಗತ ಮಾಡಿದ್ದಾರೆ. ಸುಪ್ರೀ ಕೋರ್ಟಿನ ಐವರು ನ್ಯಾಯಮೂರ್ತಿಗಳು ಏಕರೂಪದಲ್ಲಿ ಒಮ್ಮತ ಮನಸ್ಸಿನಿಂದ ಮಾಡಿದ್ದು ದೇಶದ ಅಭ್ಯುದಯದ ಪ್ರಥಮ ಹಂತ ಎಂದು ಅಭಿಪ್ರಾಯ ಪಟ್ಟರು.
ಇನ್ನು ರಾಷ್ಟ್ರೀಯ ಹೆದ್ದಾರಿ ತಲ್ಲೂರು ಸರ್ಕಲ್ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಐ.ಆರ್.ಬಿ. ಕಂಪೆನಿಗೆ ಸಂಬಂದಪಟ್ಟವರಿಗೆ ಹೆದ್ದಾರಿ ಸಮಸ್ಯೆ ಬಗ್ಗೆ ತಿಳಿಸಿದ್ದು ಸೂಕ್ತ ಕ್ರಮಕೈಗೊಂಡು ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸಲು ತಿಳಿಸಿದ್ದಾಗಿ ಹೇಳಿದರು.
ಈ ಸಂದರ್ಭ ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ ಮೊದಲಾದವರಿದ್ದರು.
Comments are closed.