ಕರಾವಳಿ

ಉಳ್ತೂರಿನಲ್ಲಿ ಕೊಟ್ಟಿಗೆಯಲ್ಲಿದ್ದ ಜಾನುವಾರನ್ನು ಕದ್ದ ಖದೀಮರು!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಉಳ್ತೂರು ಹೊಯ್ಗೆ ಸಾಲು ಎಂಬಲ್ಲಿನ ನಿವಾಸಿ ಪ್ರತಾಪ ಶೆಟ್ಟಿಯವರ ಮನೆಯಲ್ಲಿ ಹೊಸ್ವಿನ್ ಪ್ರಿಸಿಯನ್ (HF) ತಳಿಯ ದನವನ್ನು ಖದೀಮರು ಕದ್ದ ಘಟನೆ ನಡೆದಿದೆ.

ಸಾಕಿದ್ದ ದನ‌ ಕೊಂಡುಕೊಳ್ಳುತ್ತೇನೆಂದು ಸ್ಥಳೀಯ ದಲ್ಲಾಳಿಯೊಬ್ಬ ಇವರ ಮನೆಗೆ ಬಂದಿದ್ದು ಇವರು ದನ ಮಾರಾಟ ಮಾಡಲು ಒಪ್ಪಿಲ್ಲ. ಇದಾದ ಮಾರನೆ ದಿನ ಬೆಳಿಗ್ಗೆ ಮಾಲಿಕರು ಕೊಟ್ಟಿಗೆಗೆ ಹೋಗಿ ನೋಡಿದಾಗ ಕೊಟ್ಟಿಗೆಯಲ್ಲಿದ್ದ ಒಂದು ದನ ಕಾಣೆಯಾಗಿದೆ. ಕಳವಾದ ದನದ ಮೌಲ್ಯ 20 ಸಾವಿರ ಎನ್ನಲಾಗಿದ

ಸುಮಾರು 3 ತಿಂಗಳಲ್ಲಿ 18 ರಿಂದ 20 ಕ್ಕೂ ದನಗಳೂ ಮತ್ತು ದೇವಾಲಯ ಸಮೀಪ ಮಲಗುವ ಜಾನುವಾರುಗಳನ್ನು ಕದ್ದೊಯ್ದಿದ್ದಾರೆ, ಇದರಲ್ಲಿ 3 ಕ್ಕೂ ಹೆಚ್ಚೂ ಕೊಟ್ಟಿಗೆಗೆ ನುಗ್ಗಿ ಕದ್ದೊಯ್ದ ಪ್ರಕರಣಗಳು ವರದಿಯಾಗಿದೆ. ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ತಿಳಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Comments are closed.