
ಶೇಖ್‌ಪುರ: ಸಾಧ್ವಿಯೊಬ್ಬರ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವಂಥ ಘಟನೆ ಬಿಹಾರದ ಶೇಖ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸಾಧ್ವಿಯು ಉತ್ತರಪ್ರದೇಶದ ಬಸ್ತಿ ಜಿಲ್ಲೆಯ ತಮ್ಮ ಊರಿಗೆ ತೆರಳುತ್ತಿದ್ದಾಗ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಧ್ವಿಯು ಕಾಕೋಲಟ್‌ನ ಆಶ್ರಮವೊಂದರಲ್ಲಿ ವಾಸಿಸುತ್ತಿದ್ದು, ಭಾನುವಾರ ಅವರ ಊರಿನವರಾದ ಇಬ್ಬರು ಪುರುಷರು ಆಶ್ರಮಕ್ಕೆ ಬಂದು, ಸಾಧ್ವಿಯ ತಾಯಿಯು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಮಾಹಿತಿ ನೀಡಿದರು. ಕೂಡಲೇ ಸಾಧ್ವಿ ಊರಿಗೆ ಹೊರಟರು. ದಾರಿ ಮಧ್ಯೆ ಈ ಇಬ್ಬರ ಜೊತೆಗೆ ಮತ್ತಿಬ್ಬರು ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದ್ದಾಗಿ ಸಾಧ್ವಿ ದೂರಿನಲ್ಲಿ ತಿಳಿಸಿದ್ದಾರೆ.
Comments are closed.