ಉಡುಪಿ: ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಸಂತೆಕಟ್ಟೆಯ ಜೋಮ್ಲು ತೀರ್ಥ ಜಲಪಾತಕ್ಕೆ ತೆರಳಿದ್ದ ಯುವಕನೋರ್ವ ನೀರುಪಾಲಾಗಿರುವ ಘಟನೆ ರವಿವಾರ ಸಂಜೆ ವೇಳೆ ನಡೆದಿದೆ. ನಾಪತ್ತೆಯಾದ ಯುವಕನನ್ನು ಬ್ರಹ್ಮಾವರ ಸಮೀಪದ ಕೊಕ್ಕರ್ಣೆಯ ಕಾಡೂರು ಗಣಪೆ ನಿವಾಸಿ ಶೇಖರ್ ಶೆಟ್ಟಿ ಎಂಬವರ ಪುತ್ರ ಸಚಿನ್ ಕುಮಾರ್ ಶೆಟ್ಟಿ (24) ಎಂದು ಗುರುತಿಸಲಾಗಿದೆ.

ಸಚಿನ್ ಸೇರಿದಂತೆ ಏಳು ಮಂದಿ ಜೋಮ್ಲು ತೀರ್ಥಕ್ಕೆ ತೆರಳಿದ್ದಾರೆ ಎನ್ನಲಾಗಿದ್ದು, ಈ ವೇಳೆ ಸಚಿನ್ ಕಾಲುಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ನಂತರ ಈತ ಸುಮಾರು ದೂರ ಈಜಿಕೊಂಡು ಹೋಗಿರುವುದು ಇತರರು ನೋಡಿದ್ದಾರೆ ಎಂದು ತಿಳಿದುಬಂದಿದೆ. ಈತ ಬೆಂಗಳೂರಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ದೀಪಾವಳಿಯ ರಜೆಗೆ ಊರಿಗೆ ಬಂದಿದ್ದರು ಎನ್ನಲಾಗಿದೆ.
ಘಟನೆ ನಡೆದ ಸೀತಾನದಿ ಹೊಳೆ ತುಂಬಾ ಆಳವಾಗಿದೆ. ರಾತ್ರಿಯವರೆಗೂ ಸ್ಥಳೀಯರು ಹಾಗೂ ಪೊಲೀಸರು ಹುಡುಕಿ ನಡೆಸಿದರೂ ಮೃತದೇಹ ಸಿಗಲಿಲ್ಲ. ಮೃತದೇಹಕ್ಕಾಗಿ ಹೆಬ್ರಿ ಠಾಣಾ ಅಧಿಕಾರಿಗಳು ಸ್ಥಳೀಯ ಯುವಕರು ಶೋಧದಲ್ಲಿ ತೊಡಗಿದ್ದಾರೆ.
Comments are closed.