ರಾಷ್ಟ್ರೀಯ

ಕಮಲೇಶ್ ತಿವಾರಿ ಹತ್ಯೆಗೈದ ಇಬ್ಬರು ಹಂತಕರ ಸುಳಿವು ನೀಡಿದವರಿಗೆ ತಲಾ 2.50 ಲಕ್ಷ ರೂಪಾಯಿ ಬಹುಮಾನ

Pinterest LinkedIn Tumblr

ಲಕ್ನೋ: ಕಮಲೇಶ್ ತಿವಾರಿಯನ್ನು ಶೇಖ್ ಹುಸೈನ್ ಮತ್ತು ಪಠಾಣ್ ಮೋಯಿನುದ್ದೀನ್ ಅಹ್ಮದ್ ಎಂಬಿಬ್ಬರು ಹತ್ಯೆಗೈದಿದ್ದರು. ಅಕ್ಟೋಬರ್ 18ರಂದು ತಿವಾರಿ ಅವರನ್ನು ಹರಿತವಾದ ಆಯುಧದಿಂದ ಇರಿದು, ಪಿಸ್ತೂಲ್ ನಿಂದ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆಗೈದಿದ್ದರು.

ಹಿಂದೂ ಸಮಾಜ್ ಪಕ್ಷದ ಮುಖಂಡ ಕಮಲೇಶ್ ತಿವಾರಿಯನ್ನು ಹತ್ಯೆಗೈದ ಇಬ್ಬರು ಶಂಕಿತ ಹಂತಕರ ಬಂಧನಕ್ಕೆ ಸುಳಿವು ನೀಡಿದವರಿಗೆ ತಲಾ 2.50 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಉತ್ತರಪ್ರದೇಶ ಪೊಲೀಸರು ಘೋಷಿಸಿದ್ದಾರೆ.

ತಿವಾರಿ ಹತ್ಯೆ ಭಾರೀ ಆಕ್ರೋಶಕ್ಕೆ ಎಡೆಮಾಡಿಕೊಟ್ಟ ಬೆನ್ನಲ್ಲೇ ಉತ್ತರಪ್ರದೇಶ ಪೊಲೀಸರು ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಿದ್ದು, ಇಬ್ಬರು ಹಂತಕರು ಪರಾರಿಯಾಗಿದ್ದರು.

ಹಿಂದೂ ಸಮಾಜ್ ಪಕ್ಷದ ತಿವಾರಿ ಹತ್ಯೆಯ ತನಿಖೆ ನಡೆಸಿದ ಪೊಲೀಸರಿಗೆ ಗುಜರಾತ್, ಮಹಾರಾಷ್ಟ್ರ ಹಾಗೂ ವಿದೇಶದ ಸಂಪರ್ಕ ಇದ್ದಿರುವುದು ಪತ್ತೆಯಾಗಿದೆ. ಇಸ್ಲಾಂ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಪ್ರತೀಕಾರ ತೀರಿಸಿಕೊಂಡಿರುವುದಾಗಿ ವರದಿಯೊಂದು ತಿಳಿಸಿತ್ತು.

Comments are closed.