
ಮಂಗಳೂರು : ಕನ್ನಡ ರಾಜೋತ್ಸವ ಪ್ರಶಸ್ತಿ ಆಯ್ಕೆ ಮಾಡುವ ಸಂದರ್ಭದಲ್ಲಿ ನಿಯಾಮಾನುಸಾರವಾಗಿ ಸರಕಾರದ ಮಾನದಂಡದ ಮೂಲಕ ಆಯ್ಕೆ ಮಾಡಬೇಕು. ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ನೀರಿಕ್ಷೆ ಇದ್ದವರಿಗೆ ಅಲ್ಲಿ ಪ್ರಶಸ್ತಿ ಸಿಗದೆ ಇದ್ದಾಗ ಜಿಲ್ಲಾ ಮಟ್ಟದಲ್ಲಿ ನೀಡೋದು ಸಮಾಧಾನಕರವಾಗಿರುತ್ತದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬಂದಿರುವಂತಹ ಅರ್ಜಿಗಳ ಮಾಹಿತಿ ಪಡೆದ ಸಚಿವರು ಎಲ್ಲಾ ಕ್ಷೇತ್ರಗಳಿಗೆ ಹಂಚಿಕೆಯಾಗುವಂತೆ ಕನಿಷ್ಠ 25 ಪ್ರಶಸ್ತಿಗಳನ್ನು ನೀಡಬೇಕು ಎಂದು ತಿಳಿಸಿದರು.
ಅಬ್ಬಕ್ಕ ಉತ್ಸವ : ಸಮಿತಿಗಳ ಸಲಹೆಗಳಿಗೆ ಸ್ವಾಗತ
ಜಿಲ್ಲಾಡಳಿತದ ಮೂಲಕ ನಡೆಯುವಂತಹ ಪ್ರತಿ ಉತ್ಸವಗಳಿಗೆ ಸಂಬಧಪಟ್ಟ ಸಮಿತಿಗಳು ತಮ್ಮ ಸಲಹೆಗಳನ್ನು ನೀಡಬಹುದು, ಆದುದರಿಂದ ಅಬ್ಬಕ್ಕ ಉತ್ಸವಕ್ಕೆ ಸಂಬಂಧಿಸಿದ ಎರಡು ಸಮಿತಿಗಳನ್ನು ಸೇರಿಸಿ ಸಭೆ ನಡೆಸುವ ಹಾಗೂ ಅವರ ಅಭಿಪ್ರಾಯಗಳನ್ನು ಪಡೆದು ಸರಕಾರದ ನಿಯಮದ ಪ್ರಕಾರ ಉತ್ಸವ ನಡೆಸುವುದು ಸೂಕ್ತವಾದೆ. ಕರಾವಳಿ ಉತ್ಸವದ ಹಿಂದಿನ ವರ್ಷದ ಮಾದರಿಯನ್ನು ಸರಕಾರಕ್ಕೆ ನೀಡಿ ಅದರಂತೆ ಪ್ರಸ್ತುತ ಕರಾವಳಿ ಉತ್ಸವ ನಡೆಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ, ಮುಖ್ಯಕಾರ್ಯನಿವಾಹಣಾಧಿಕಾರಿ ಡಾ ಆರ್ ಸೆಲ್ವಮಣಿ, ಉಳ್ಳಾಲ ಶಾಸಕ ಯು ಟಿ ಖಾದರ್, ಮೂಡಬಿದ್ರೆ ಶಾಸಕ ಊಮಾನಾಥ ಕೋಟ್ಯಾನ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತ ರಿದ್ದರು.
Comments are closed.