ಕರಾವಳಿ

ವೀರೇಂದ್ರ ಶೆಟ್ಟಿಯವರ ಬಹುನಿರೀಕ್ಷಿತ “ಸವರ್ಣದೀರ್ಘ ಸಂಧಿ” ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್.17: ವೀರು ಟಾಕೀಸ್ ಮತ್ತು ಲೈಲಾಕ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಖ್ಯಾತ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ನಿರ್ದೇಶಿಸಿ, ನಟಿಸಿರುವ ಸವರ್ಣದೀರ್ಘ ಸಂಧಿ ಕನ್ನಡ ಸಿನಿಮಾವು ನಾಳೆ (ಅಕ್ಟೋಬರ್ 18ರಂದು) ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ವೀರೇಂದ್ರ ಶೆಟ್ಟಿ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೇಲೊಂದರಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು, ಈ ಸಿನಿಮಾವು ವ್ಯಾಕರಣ ಕಾಮಿಡಿ ಜಾನರ್ನ್ನು ಹೊಂದಿದೆ. ಹಿರಿಯ ನಟಿ ವಿನಯಪ್ರಸಾದ್ ಅವರ ಸಹೋದರನ ಮಗಳಾದ ಕೃಷ್ಣಾ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದರು.

ನಿರ್ದೇಶನ-ಕಥೆ-ಚಿತ್ರಕಥೆ-ಸಂಭಾಷಣೆ: ವೀರೇಂದ್ರ ಶೆಟ್ಟಿ ಕಾವೂರು. ಲುಷಿಂಗ್ಟನ್ ಥಾಮಸ್, ಹೇಮಂತ್ ಕುಮಾರ್ (ಪಿವಿಆರ್), ಮನೋಮೂರ್ತಿ, ವೀರೇಂದ್ರ ಶೆಟ್ಟಿ ಸೇರಿದಂತೆ ನಾಲ್ಕು ಜನ ನಿರ್ಮಾಪಕರನ್ನು ಹೊಂದಿರುವ ಈ ಸಿನಿಮಾಗೆ ಮನೋಮೂರ್ತಿ ಸಂಗೀತವಿದೆ. ಶಂಕರ್ ಮಹದೇವನ್, ಶ್ರೇಯಾ ಘೋಷಾಲ್ , ಶಶಿಕಲಾ ಸುನೀಲ್, ವಿಧಿಷಾ ವಿಶ್ವಾಸ್ ಹಿನ್ನೆಲೆ ಗಾಯನ ಈ ಚಿತ್ರಕ್ಕಿದೆ. ಉಸ್ತಾದ್ ಹೋಟೆಲ್ ಖ್ಯಾತಿಯ ಛಾಯಾಗ್ರಾಹಕ ಲೋಗನಾಥನ್ ಶ್ರೀನಿವಾಸನ್ ಕ್ಯಾಮಾರ ಈ ಸಿನಿಮಾಕ್ಕಿದೆ. ಸಂಕೇತ್ ಶಿವಪ್ಪ ಸಂಕಲನ ಮಾಡಿದ್ದಾರೆ.ಆನೇಕಲ್, ಜಿಗಣಿ, ದೇವರಾಯನ ದುರ್ಗಾ, ಮೂಡಿಗೆರೆ, ಮತ್ತು ಬೆಂಗಳೂರು ಆಸುಪಾಸು ಚಿತ್ರೀಕರಣ ನಡೆದಿದೆ.

ತಾರಾಗಣ: ವೀರೇಂದ್ರ ಶೆಟ್ಟಿ, ಕೃಷ್ಣಾ, ರವಿಭಟ್, ಕೃಷ್ಣ ನಾಡಿಗ್, ಪದ್ಮಜ ಸುರೇಂದ್ರ ಬಂಟ್ವಾಳ, ನಿರಂಜನ್ ದೇಶಪಾಂಡೆ, ರವಿ ಮಂಡ್ಯ, ಅಜಿತ್ ಹನಮಕ್ಕನವರ್ , ಅಲ್ವಿನ್ ಸಚಿನ್ ಡಿಸೋಜ, ಅವಿನಾಶ್ ನೀನಾಸಂ, ದತ್ತಾತ್ರೇಯ ಕುರಹಟ್ಟಿ, ರಾಮರಾವ್, ಸಂಕೇತ್ ಶಿವಪ್ಪ, ಪ್ರಣವ್ ಮೂರ್ತಿ, ಅಪ್ರಮೆಯ, ರಾಘು ಕಲಾವಿದ, ವಿಕ್ಕಿ, ಮಧುಸೂದನ್, ಮಧು ಭಾರದ್ವಾಜ್, ಎಲಿಜಬೆತ್ ಥಾಮಸ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಹೇಮಂತ್ ಕುಮಾರ್, ಚಿತ್ರದ ನಾಯಕಿ ನಟಿ ಕೃಷ್ಣಾ, ನಟರಾದ ಸುರೇಂದ್ರ ಬಂಟ್ವಾಳ, ಗಿರೀಶ್ ಎಮ್.ಶೆಟ್ಟಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ರವೀಂದ್ರ ಶೆಟ್ಟಿ ನಿರ್ವಹಿಸಿದರು.

Comments are closed.