ಕರಾವಳಿ

ಸೌತ್ ಝೋನ್ ಸ್ಕೇಟಿಂಗ್ ಚಾಂಪಿಯನ್ ಶಿಪ್ : ಮಂಗಳೂರಿನ ಅನಘಾಗೆ ಎರಡು ಕಂಚಿನ‌ ಪದಕ

Pinterest LinkedIn Tumblr

ಮಂಗಳೂರು : ಬೆಳಗಾವಿಯಲ್ಲಿ ಸಿಬಿಎಸ್ ಇ ಬೋರ್ಡ್ ಹಾಗೂ ಜೈನ್ ಹೆರಿಟೇಜ್ ಸ್ಕೂಲ್ ಆಯೋಜಿಸಿದ ಸೌತ್ ಝೋನ್ ಸ್ಕೇಟಿಂಗ್ ಚಾಂಪಿಯನ್ ಶಿಪ್- 2019ರಲ್ಲಿ ಮಂಗಳೂರಿನ ಅನಘಾ ಎರಡು ಕಂಚಿನ‌ ಪದಕ ಪಡೆದಿದ್ದಾರೆ.

ಬೆಳಗಾವಿಯ ಶಿವಗಂಗಾ ಸ್ಕೇಟಿಂಗ್ ರಿಂಕ್ ನಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ಗೋವಾ ರಾಜ್ಯಗಳ ಸೌತ್ ಝೋನ್ ಚಾಂಪಿಯನ್ ಶಿಪ್ ನ‌ 10 ವರ್ಷದೊಳಗಿನ ಹುಡುಗಿಯರ ವಿಭಾಗದ 500 ಹಾಗೂ 1,000 ಮೀಟರ್ ರಿಂಕ್ ರೇಸ್ ನಲ್ಲಿ ತಲಾ ಎರಡು ಕಂಚಿನ ಪದಕ ಪಡೆದಿದ್ದಾರೆ.

ಮಂಗಳೂರಿನ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಲೂಡ್ಸ್ ಸೆಂಟ್ರಲ್ ಸ್ಕೂಲ್ ನ 4 ನೇ ತರಗತಿಯ ವಿದ್ಯಾರ್ಥಿನಿ. ಮಂಗಳೂರಿನ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಸದಸ್ಯೆಯಾಗಿರುವ ಅನಘಾ ತರಬೇತುದಾರರಾದ ಮೋಹನ್ ದಾಸ್. ಕೆ ಹಾಗೂ ಜಯರಾಜ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

Comments are closed.