ಅಂತರಾಷ್ಟ್ರೀಯ

ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುವ ಭಾರತೀಯ ಸಂಜಾತ ಅಭಿಜಿತ್ ಬ್ಯಾನರ್ಜಿ ಆರ್ಥಿಕ ಚೇತರಿಕೆಗೆ ನೀಡುವ ಸಲಹೆಗಳು

Pinterest LinkedIn Tumblr


ನವದೆಹಲಿ: ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುವ ಭಾರತೀಯ ಸಂಜಾತ ಅಮೆರಿಕದ ಅಭಿಜಿತ್ ಬ್ಯಾನರ್ಜಿ ಅವರು ಸಿಎನ್​ಬಿಸಿ-ಟಿವಿ 18ಗೆ ನೀಡಿದ ವಿಶೇಷ ಸಂದರ್ಶಣದಲ್ಲಿ ದೇಶದ ಆರ್ಥಿಕ ಕುಸಿತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆರ್ಥಿಕ ಸದೃಢತೆಗೆ ಸರ್ಕಾರ ಕೆಲಸಕ್ಕೆ ಬರುವ ನೀತಿಗಳನ್ನು ಜಾರಿಗೆ ತರಬೇಕು. ತಾವು ಯೋಚಿಸಿದಂತೆ ಕೆಲಸವಾಗುವ ನೀತಿಗಳನ್ನು ಮಾಡಬಾರದು ಎಂದು ಹೇಳಿದ್ದಾರೆ.

ಜಾಗತಿಕ ಬಡತನ ನಿರ್ಮೂನೆಗಾಗಿ ಕೈಗೊಂಡ ಪ್ರಾಯೋಗಿಕ ಅಧ್ಯಯನಕ್ಕಾಗಿ ಅಭಿಜಿತ್ ಬ್ಯಾನರ್ಜಿ ಸೇರಿ ಮೂವರು ಅರ್ಥಶಾಸ್ತ್ರಜ್ಞರನ್ನು ಇಂದು ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದ ಬಳಿಕ ಸಿಎನ್​ಬಿಸಿ-ಟಿವಿ 18 ನೊಂದಿಗೆ ಮಾತನಾಡಿದ ಅಭಿಜಿತ್ ಬ್ಯಾನರ್ಜಿ ಅವರು, ಆರ್ಥಿಕ ಚೇತರಿಕೆಗಾಗಿ ಸರ್ಕಾರ ಎಚ್ಚರಿಕೆಯಿಂದ ಹೆಚ್ಚೆಚ್ಚು ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಭಾರತದಲ್ಲಿ ಘೋಷಿಸುವ ಯೋಜನೆಗಳಿಗೆ ಸಣ್ಣಪ್ರಮಾಣದಲ್ಲಿ ಇಚ್ಛೆ ಇರುತ್ತದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಪ್ರತಿಯೊಂದು ಯೋಜನೆಯಲ್ಲೂ ಅವರು ಒಳ್ಳೆಯ ಸದ್ದು ಮಾಡುತ್ತಾರೆ. ಅಥವಾ ಅದರ ಹಿಂದೆ ರಾಜಕೀಯ ಉದ್ದೇಶವಿರುತ್ತದೆ. ನೀವು ಅವುಗಳನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕು, ಯೋಜನೆ ಕೆಲಸಕ್ಕೆ ಬರುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮತ್ತು ಅಲ್ಲಿಂದಲೇ ಅವುಗಳನ್ನು ತೆಗೆದುಕೊಳ್ಳಬೇಕು. ಯೋಜನೆಗಳನ್ನು ಒಪ್ಪಿಕೊಂಡ ಮಾನದಂಡದ ಆಧಾರದ ಮೇಲೆ ಅವುಗಳನ್ನು ಈಗಲೂ ಮೌಲ್ಯಮಾಪನ ಮಾಡಲಾಗುತ್ತಿಲ್ಲ ಎಂದು ನಾನು ಭಾವಿಸುತ್ತೇನೆ. ಮತ್ತು ಅವುಗಳ ಆಯ್ಕೆಗಳನ್ನಷ್ಟೇ ನೋಡಲಾಗುತ್ತಿದೆ ಎಂದರು.

ಸರಕು ಮತ್ತು ಸೇವಾ ತೆರಿಗೆ ಅನುಷ್ಠಾನದಲ್ಲಿನ ನ್ಯೂನತೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಪ್ಪಿಕೊಂಡ ಒಂದು ದಿನದ ಬಳಿಕ ಉದ್ಯಮಶೀಲ ಯೋಜನೆಗಳ ಬಗ್ಗೆ ಅವರು ಹೇಳಿಕೆ ನೀಡಿದ್ದಾರೆ. ಜಿಎಸ್​ಟಿ ಅನುಷ್ಠಾನದಿಂದ ನಿಮಗೆ ಕಠಿಣವಾಗಿರಬಹುದು ಆದರೆ, ಕ್ಷಮಿಸಿ, ಇದು ಈಗ ಈ ದೇಶದ ಕಾನೂನು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು.

ನರೇಂದ್ರ ಮೋದಿ ಅವರು ನೋಟು ಅಮಾನ್ಯ ಮಾಡಿದ್ದ ಕ್ರಮವನ್ನು ಅಭಿಜಿತ್ ಬ್ಯಾನರ್ಜಿ ಅವರು ಕಠಿಣವಾಗಿ ವಿರೋಧಿಸಿದ್ದರು. 2017ರಂದು ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ನೋಟು ರದ್ದತಿ ಹಿಂದಿನ ತರ್ಕವೇ ನನಗೆ ಅರ್ಥವಾಗುತ್ತಿಲ್ಲ ಎಂದು ಟೀಕಿಸಿದ್ದರು. ಅಲ್ಲದೇ, ಯುಪಿಎ ಅವಧಿಯಲ್ಲಿ ಜಾರಿಗೆ ತಂದ ನರೇಗಾ ಯೋಜನೆ ಬಗ್ಗೆ ಪ್ರಶಂಸಿಸಿದ್ದರು.

ಜೊತೆಗೆ ಗ್ರಾಮೀಣ ರಸ್ತೆ ಯೋಜನೆಗಳು (ಪಿಎಂಜಿಎಸ್​ವೈ) ಸಹ ಪರಿಣಾಮಕಾರಿಯಾಗಿದೆ. ಏಕೆಂದರೆ ವಲಸೆ ಹೋಗುವ ಜನರು ಹೋದ ಕಡೆಯಲ್ಲಿ ಕೆಲಸ ಸುಲಭವಾಗಿ ಸಿಗುವಂತಾಗಿದೆ ಎಂದು ಎಂಐಟಿ ಪ್ರಾಧ್ಯಾಪಕ ಅಭಿಜಿತ್ ಬ್ಯಾನರ್ಜಿ ಹೇಳಿದ್ದರು.

ಪ್ರಧಾನಮಂತ್ರಿ ಕಿಸಾನ್ ಯೋಜನೆಯನ್ನು ಹೊಗಳಿದ ಬ್ಯಾನರ್ಜಿ, ಸಣ್ಣ ರೈತರಿಗೆ ಹಣ ಸಂದಾಯ ಮಾಡುವ ಈ ಯೋಜನೆ ಉತ್ತಮವಾಗಿದೆ. ಆದರೆ, ಕೊಡುತ್ತಿರುವ ಪ್ರಮಾಣ ಮಾತ್ರ ಕಡಿಮೆಯಾಗಿವೆ. ವಾರ್ಷಿಕವಾಗಿ ಮೂರು ಕಂತುಗಳಲ್ಲಿ ಆರು ಸಾವಿರ ಬಹಳ ಕಡಿಮೆ ಮೊತ್ತವಾಗಿದೆ. ಇದನ್ನು ಹೆಚ್ಚು ಮಾಡಿದರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

Comments are closed.