ಉಡುಪಿ: ರಿಕ್ಷಾ ಹಾರ್ನ್ ಮಾಡಬೇಡಿ ಅಂದಿದ್ದಕ್ಕೆ ಕುಪಿತಗೊಂಡ ಮೂವರು ವ್ಯಕ್ತಿಯೊಬ್ಬರಿಗೆ ಹಿಗ್ಗಾಮುಗ್ಗ ಥಳಿಸಿ ಜೀವಬೆದರಿಕೆ ಹಾಕಿದ ಘಟನೆ ಉಡುಪಿ ಜಿಲ್ಲೆಯ ಕೋಟದಲ್ಲಿ ನಡೆದಿದೆ. ಕೋಟತಟ್ಟು ನಿವಾಸಿ ಪ್ರದೀಪ ಕುಮಾರ ಕೆ.ಎ ಎನ್ನುವರು ಹಲ್ಲೆಗೊಳಗಾದವರು. ರಿಕ್ಷಾ ಚಾಲಕ ಕೇಶವ, ಸುದರ್ಶನ ಶೆಟ್ಟಿ ಮತ್ತು ಮಹೇಂದ್ರ ಎನ್ನುವರು ಹಲ್ಲೆ ಮಾಡಿದ ಆರೋಪಿಗಳು.

ಪ್ರದೀಪ್ ಅವರ ಕಾರಿನ ಡಿಸೇಲ್ ಖಾಲಿಯಾಗಿದ್ದರಿಂದ ಡಿಸೇಲ್ ತರಲು ಸ್ನೇಹಿತ ನಿತಿನ್ ನೊಂದಿಗೆ ಕೋಟದ ಪೆಟ್ರೋಲ್ ಬಂಕೊಂದಕ್ಕೆ ಹೋಗಿ ಕ್ಯಾನ್ ಗೆ ಡಿಸೇಲ್ ತುಂಬಿಸಿಕೊಳ್ಳುತ್ತಿರುವಾಗ ರಿಕ್ಷಾವೊಂದರಲ್ಲಿ 3 ಜನರು ಬಂದಿದ್ದು ಅವರು ರಿಕ್ಷಾಕ್ಕೆ ಡಿಸೇಲ್ ತುಂಬಿಸಲು ಸರದಿ ಸಾಲಿನಲ್ಲಿ ರಿಕ್ಷಾವನ್ನು ನಿಲ್ಲಿಸಿ ಏಕಾಏಕಿಯಾಗಿ ವಿಪರೀತವಾಗಿ ಹಾರ್ನ್ ಹಾಕಿದ್ದರು. ಆಗ ಪ್ರದೀಪ್ ಅವರು ರಿಕ್ಷಾದವರಲ್ಲಿ ಹಾರ್ನ್ ಹಾಕಬೇಡಿ ಎಂದು ಹೇಳಿದಕ್ಕೆಸಿಟ್ಟುಗೊಂದ ಅವರು ಬೈದು, ಮೂವರು ಸೇರಿ ಮುಖಕ್ಕೆ, ಕಣ್ಣಿನ ಬಳಿ ಜೋರಾಗಿ ಹೊಡೆದಿದ್ದಾರೆ. ಪ್ರದೀಪ್ ಜೋರಾಗಿ ಬೊಬ್ಬೆ ಹಾಕಿದಾಗ ಪೆಟ್ರೋಲ್ ಬಂಕ್ ನವರು ಹಾಗೂ ಸಾರ್ವಜನಿಕರು ಬಂದಿದ್ದನ್ನು ನೋಡಿ ಇದು ಇಲ್ಲಿಗೆ ಮುಗಿಯಲಿಲ್ಲ ನಿನ್ನ ಕೈಕಾಲು ಮುರಿದು ಹಾಕುತ್ತೇನೆಂದು ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ.
ಹಲ್ಲೆಯಿಂದ ಪ್ರದೀಪ್ ಮುಖಕ್ಕೆ ತೀವ್ರ ರಕ್ತಗಾಯವಾಗಿದ್ದು ಮತ್ತು ಮೈ ಕೈಗೆ ಬೆನ್ನಿಗೆ ಹೊಡೆದ ಪರಿಣಾಮ ನೋವು ಜಾಸ್ತಿಯಾಗಿದ್ದರಿಂದ ಚಿಕಿತ್ಸೆಯ ಬಗ್ಗೆ ಗಾಗಿ ಸ್ನೇಹಿತನೊಂದಿಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.