ಕರಾವಳಿ

ಉಂಡ ಮನೆಗೆ ಕನ್ನ; 8.75 ಲಕ್ಷದ ಚಿನ್ನಾಭರಣದೊಂದಿಗೆ ಕೆಲಸದಾಕೆ ಪರಾರಿ!

Pinterest LinkedIn Tumblr

ಉಡುಪಿ: ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಕೆಲಸದಾಳು ಯುವತಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ 250 ಗ್ರಾಂ ತೂಕದ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ಮಣಿಪಾಲದಲ್ಲಿ ನಡೆದಿದೆ.

ಮಣಿಪಾಲದ ಈಶ್ವರನಗರ ನಿವಾಸಿ ಡಾ. ಶೋಭ ಯು ಕಾಮತ್‌ ಎನ್ನುವರ ಮನೆಯಲ್ಲಿ ಈ ಕಳ್ಳತನ ನಡೆದ ಬಗ್ಗೆ ಅವರು ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಮನೆಯ ಕೆಲಸದಾಳು ಪ್ರೇಮಾ ಲಂಬಾಣಿ ಎನ್ನುವಾಕೆ ಈ ಕಳ್ಳತನ ಮಾಡಿದ್ದು ಮನೆಯಲ್ಲಿದ್ದ 250 ಗ್ರಾಂ ತೂಕದ 8,75,000 ರೂ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರುತನಿಖೆ ನಡೆಸುತ್ತಿದ್ದಾರೆ.

Comments are closed.