ಸಿನಿಮಾ ನಟ, ನಟಿಯರು ಪ್ರತಿಯೊಂದು ಸಿನಿಮಾ ಒಪ್ಪಬೇಕಾದರೂ ಚಿತ್ರ ತಂಡದ ಜೊತೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಸಂಭಾವನೆ, ಭದ್ರತೆ, ಶೂಟಿಂಗ್ ಸೇರಿದಂತೆ ಯಾವುದೇ ಅಗತ್ಯ, ಯಾವುದು ಅನಗತ್ಯ, ಏನು ಮಾಡ್ತೀವಿ, ಏನು ಮಾಡಲ್ಲ ಎನ್ನುವುದನ್ನ ಈ ಒಪ್ಪಂದದಲ್ಲಿ ಉಲ್ಲೇಖಿಸುತ್ತಾರೆ.
ಹೀಗೆ, ಪ್ರತಿ ಸಿನಿಮಾ ತಂಡದ ಜೊತೆ ಮಾಡಿಕೊಳ್ಳುವ ಅಗ್ರಿಮೆಂಟ್ ನಲ್ಲಿ ನಟಿ ತಮನ್ನಾ ‘ಈ ದೃಶ್ಯ ಮಾಡಲ್ಲ’ ಎಂದು ವಿಶೇಷವಾಗಿ ನಮೂದಿಸಿ ಸಹಿ ಹಾಕ್ತಾರಂತೆ.
ಹೌದು, ಪ್ರತಿಯೊಂದು ಚಿತ್ರದ ಅಗ್ರಿಮೆಂಟ್ ಗೆ ಸಹಿ ಹಾಕುವಾಗ ಲಿಪ್ ಲಾಕ್ ದೃಶ್ಯಗಳು ಮಾಡುವುದಿಲ್ಲ ಎಂದು ಸಹಿ ಮಾಡ್ತಾರಂತೆ. ಅವಶ್ಯಕವಿದ್ದರೆ ಹಾಟ್ ಆಗಿ ಕಾಣಿಸಿಕೊಳ್ಳುವುದಕ್ಕೆ ಸಿದ್ಧ ಎನ್ನುವ ತಮನ್ನಾ, ಚುಂಬನ ದೃಶ್ಯಕ್ಕೆ ಮಾತ್ರ ಓಕೆ ಎನ್ನುವುದಿಲ್ಲವಂತೆ.
”ನಾನು 13 ವರ್ಷವಿದ್ದಾಗಲೇ ಚಿತ್ರರಂಗಕ್ಕೆ ಬಂದೆ. ಆಗಲೇ ಈ ಲಿಪ್ ಲಾಕ್ ಮಾಡುವುದಿಲ್ಲ ಎಂದು ನಿರ್ಧರಿಸಿದ್ದೆ. ಇದನ್ನ ಪ್ರತಿ ಚಿತ್ರದ ಅಗ್ರಿಮೆಂಟ್ ನಲ್ಲೂ ನಮೂದಿಸುತ್ತೇನೆ. ಅದು ಮುಂದೆಯೂ ಮುಂದುವರಿಯುತ್ತೆ. ಈ ನೀತಿಯಿಂದ ಹೊರಬರುವುದಕ್ಕೆ ಯಾವ ಕಾರಣವೂ ನನಗೆ ಸಿಗುತ್ತಿಲ್ಲ” ಎಂದು ಮಿಲ್ಕಿ ಬ್ಯೂಟಿ ಹೇಳಿಕೊಂಡಿದ್ದಾರೆ.
ಈ ಹಿಂದಿನ ಸಿನಿಮಾಗಳಲ್ಲಿಯೂ ತಮನ್ನಾ ಎಲ್ಲಿಯೂ ಲಿಪ್ ಲಾಕ್ ಮಾಡಿಲ್ಲ. ಕಿಸ್ಸಿಂಗ್ ದೃಶ್ಯದಲ್ಲೂ ಕಾಣಿಸಿಕೊಂಡಿದ್ದರೂ ಅದು ಕೇವಲ ಕ್ಯಾಮೆರಾ ಆಂಗಲ್ ಬದಲಿಸಿ ಚಿತ್ರೀಕರಿಸಲಾಗಿದೆ. ಅದನ್ನ ಬಿಟ್ಟರೆ ಬಿಕಿನಿ ತೊಟ್ಟಿದ್ದಾರೆ, ಹಾಟ್ ಆಗಿ ನಟಿಸಿದ್ದಾರೆ.
ಸೈರಾ ನರಸಿಂಹ ರೆಡ್ಡಿ ಮತ್ತು ಪೆಟ್ರೋಮ್ಯಾಕ್ಸ್ ಸಿನಿಮಾಗಳ ಬಳಿಕ ಆಕ್ಷನ್, ಸರಿಲೇರು ನೀಕೆವರು, ದಟ್ ಈಸ್ ಮಹಾಲಕ್ಷ್ಮಿ ಜೊತೆಗೆ ಒಂದು ಹಿಂದಿ ಸಿನಿಮಾದಲ್ಲಿ ತಮನ್ನಾ ನಟಿಸುತ್ತಿದ್ದಾರೆ.

Comments are closed.