ಉಡುಪಿ: ಎಐಸಿಸಿ ಕಾರ್ಯದರ್ಶಿ ಪಿ.ಸಿ.ವಿಷ್ಣುನಾಥನ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಮಂಜೇಶ್ವರದಲ್ಲಿ ನಡೆಯುವ ವಿಧಾನಸಭಾ ಉಪ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ತೊಡಗುವಂತೆ ನಿರ್ದೇಶನ ನೀಡಿದ್ದಾರೆಂದು ತಿಳಿದುಬಂದಿದ್ದು ಇದನ್ನು ಸ್ವತಃ ಪ್ರಮೋದ್ ಟ್ವೀಟ್ ಮೂಲಕ ಹಾಗೂ ಖಾಸಗಿ ವಾಹಿನಿಗಳಿಗೆ ಪ್ರತಿಕ್ರಿಯೆ ನೀಡುವ ಮೂಲಕ ದೃಢೀಕರಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು, ದೂರವಾಣಿ ಮೂಲಕ ಸಂಪರ್ಕಿಸಿ ಕೇರಳದ ಮಂಜೇಶ್ವರ ದಲ್ಲಿ ನಡೆಯುವ ವಿಧಾನ ಸಭಾ ಉಪ ಚುನಾವಣಾ ಪ್ರಯುಕ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ನೇತೃತ್ವದಲ್ಲಿ ಶನಿವಾರದಂದು ಉಪ್ಪಳದಲ್ಲಿ ನಡೆಯುವ ಚುನಾವಣಾ ತಯಾರಿ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದ್ದಾರೆ ಎಂದು ಸ್ವತಃ ಪ್ರಮೋದ್ ಹೇಳಿದ್ದಾರೆ.
ಇನ್ನು ತಾನು ಕಾಂಗ್ರೆಸ್ ಪಕ್ಷ ಬಿಟ್ಟೇ ಇಲ್ಲ. ಮತ್ಯಾಕೆ ಪುನಃ ಸೇರುವ ಪ್ರಶ್ನೆ ಎಂದು ಕಾಂಗ್ರೆಸ್ ಸೇರುವ ಬಗೆಗಿನ ಗೊಂದಲಕ್ಕೆ ಸ್ಪಷ್ಟನೆ ನೀಡಿದ್ರು.
Comments are closed.