
ಸ್ಯಾಂಡಲ್‍ವುಡ್ ಡಿಂಪಲ್ ಬೆಡಗಿ ರಚಿತಾ ರಾಮ್ ಅವರು ಇಂದು ತಮ್ಮ 27ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಇಂದು ರಚಿತಾ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ನಿನ್ನೆಯಿಂದಲೇ ಶುಭಾಶಯ ತಿಳಿಸಲು ಶುರು ಮಾಡಿದ್ದಾರೆ. ಈ ವೇಳೆ ಡಿಂಪರ್ ಬೆಡಗಿ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಫೋಟೋ ಹಾಕಿ “ಹುಟ್ಟುಹಬ್ಬದ ಮೊದಲೇ ಶುಭಾಶಯ ತಿಳಿಸಿದ ಅಭಿಮಾನಿಗಳಿಗೆ ಧನ್ಯವಾದಗಳು. ನನ್ನ ಹುಟ್ಟುಹಬ್ಬ ಅಕ್ಟೋಬರ್ 3ರಂದು ಇರುವುದು” ಎಂದು ದಿನಾಂಕದ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ ನಿಖಿಲ್ ಕುಮಾರಸ್ವಾಮಿ ಅವರು ರಚಿತಾ ಜೊತೆ ಕುಳಿತಿರುವ ಫೋಟೋ ಶೇರ್ ಮಾಡಿ,“ನನ್ನ ಪ್ರೀತಿಯ ಸ್ನೇಹಿತೆಗೆ ಹುಟ್ಟುಹಬ್ಬದ ಶುಭಾಶಯಗಳು, ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ” ಎಂದು ಶುಭಾಶಯ ಹೇಳಿದ್ದಾರೆ.
ರಚಿತಾ ರಾಮ್ ಇಂದು ಮನೆಯಲ್ಲಿಯೆ ಸ್ನೇಹಿತರು ಮತ್ತು ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಡಿಂಪಲ್ ಕ್ವೀನ್ ಸದ್ಯ ರಮೇಶ್ ಅರವಿಂದ್ ನಿರ್ದೇಶನದ 100, ಏಪ್ರಿಲ್, ಧನಂಜಯ್ ಜೊತೆ ಡಾಲಿ, ಸಂಜು ಅಲಿಯಾಸ್ ಸಂಜು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Comments are closed.