
ಮಂಗಳೂರು : ಸಾಧಕನಿಗೆ ದೈಹಿಕ ನ್ಯೂನತೆ ಅಡ್ಡಿಯಾಗದು ಎನ್ನುವ ಮಾತಿಗೆ ಈ ಯುವಕರೇ ಆದರ್ಶ ಎನ್ನಬಹುದು. ಈ ಯುವಕರಿಗೆ ಮಾತು ಬರುವುದಿಲ್ಲ ಮತ್ತು ಕಿವಿಯೂ ಕೇಳಿಸುವುದಿಲ್ಲ. ಆದರೆ ಮನೋಬಲ ಎನ್ನುವುದು ಇವರೊಳಗೆ ಗಟ್ಟಿಯಾಗಿ ಬೇರೂರಿದೆ. ಒಬ್ಬ ಆರೋಗ್ಯವಂತ ವ್ಯಕ್ತಿಗಿಂತಲೂ ಇವರು ಕ್ರೀಯಾಶೀಲರಾಗಿದ್ದಾರೆ.
ಇತ್ತೀಚಿಗೆ ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿದ ಈ ಯುವಕರ ತಂಡ ವಿಶೇಷ ಸಾಧನೆಗೈದಿದೆ. ವಾಲಿಬಾಲ್ ಪಂದ್ಯದ ಕೂಟದಲ್ಲಿ ರಾಜ್ಯದ ಪ್ರಥಮ ಸ್ಥಾನಿಯಾಗಿ ಹೊರಬಂದಿದೆ. ಅನೇಕ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವ ಮೂಲಕ ದ.ಕ ಜಿಲ್ಲೆಗೆ ಹಿರಿಮೆ ತಂದಿದ್ದಾರೆ.
ಖಾಲಿ ಕೈಯಲ್ಲಿ ಮಂಗಳೂರಿನಿಂದ ಹೊರಟಿದ್ದ ಯುವಕರು ಇಂದು ಸಾಧನೆಗಳ ಪದಕಗಳನ್ನು ಕೈಗಳಲ್ಲಿ ತುಂಬಿಸಿಕೊಂಡು ಬಂದಿರುವುದಕ್ಕೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್ ಅವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಜೊತೆಗೆ ಮಂಗಳೂರಿನ ಸಮಸ್ತ ಜನತೆ ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Comments are closed.