
ಬೆಂಗಳೂರು: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೆ ಏರಿ ಒಂದು ತಿಂಗಳ ಆಯ್ತು. ಆದರೆ, ಇವತ್ತು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ ಮಾಡಿರುವ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಂದಾಯ ಸಚಿವ ಆರ್. ಅಶೋಕ್ಗೂ ಇಲ್ಲ, ಡಿಸಿಎಂ ಡಾ. ಅಶ್ವಥ್ ನಾರಾಯಣಗೂ ಇಲ್ಲ ಬೆಂಗಳೂರು ನಗರ ಉಸ್ತುವಾರಿ ಯಡಿಯೂರಪ್ಪ ಅವರ ಪಾಲಿಗೆ ಒದಗಿ ಬಂದಿದೆ.
ಗೋವಿಂದ ಕಾರಜೋಳ- ಬಾಗಲಕೋಟೆ, ಕಲಬುರಗಿ ( ಕಲಬುರಗಿ ಜಿಲ್ಲೆ ಹೆಚ್ಚುವರಿ ಹೊಣೆ)
ಡಾ ಅಶ್ವಥ್ ನಾರಾಯಣ್- ರಾಮನಗರ ಹಾಗೂ ಚಿಕ್ಕಬಳ್ಳಾಪುರ ( ಚಿಕ್ಕಬಳ್ಳಾಪುರ ಹೆಚ್ಚುವರಿ ಹೊಣೆ)
ಲಕ್ಷ್ಮಣ ಸವಧಿ- ಬಳ್ಳಾರಿ, ಕೊಪ್ಪ ಳ(ಕೊಪ್ಪಳ ಹೆಚ್ಚುವರಿ ಹೊಣೆ)
ಆರ್ ಅಶೋಕ್ – ಬೆಂಗಳೂರು ಗ್ರಾಮಾಂತರ , ಮಂಡ್ಯ
ಜಗದೀಶ್ ಶೆಟ್ಟರ್- ಬೆಳಗಾವಿ , ಹುಬ್ಬಳ್ಳಿ – ಧಾರವಾಡ
ಶ್ರೀರಾಮುಲು- ರಾಯಚೂರು, ಚಿತ್ರದುರ್ಗ
ಸುರೇಶ್ ಕುಮಾರ್ – ಚಾಮರಾಜನಗರ
ವಿ. ಸೋಮಣ್ಣ – ಮೈಸೂರು ,ಮಡಿಕೇರಿ
ಬಸವರಾಜ್ ಬೊಮ್ಮಾಯಿ- ಉಡುಪಿ, ಹಾವೇರಿ
ಹೆಚ್ ನಾಗೇಶ್ – ಕೋಲಾರ
ಪ್ರಭು ಚೌಹಾಣ್- ಬೀದರ್, ಯಾದಗಿರಿ
ಸಿ ಸಿ ಪಾಟೀಲ್-ಗದಗ, ವಿಜಯಪುರ
ಸಿ.ಟಿ ರವಿ-ಚಿಕ್ಕಮಗಳೂರು
ಮಾಧುಸ್ವಾಮಿ-ತುಮಕೂರು, ಹಾಸನ
ಬೆಂಗಳೂರು ನಗರ ಉಸ್ತುವಾರಿ ಸಚಿವ ಸ್ಥಾನವನ್ನು ಬಿಎಸ್ ವೈ ಅವರು ತಾವೇ ಇಟ್ಟುಕೊಂಡಿದ್ದಾರೆ. ಸಚಿವ ಆರ್. ಅಶೋಕ್ ಹಾಗೂ ಡಿಸಿಎಂ ಡಾ. ಅಶ್ವಥ್ ನಾರಾಯಣ್ ನಡುವೆ ಈಗಾಗಲೇ ಬೆಂಗಳೂರು ನಗರ ಉಸ್ತುವಾರಿ ಬೇಕೆಂದು ಪೈಪೋಟಿ ಮಾಡಿದ್ದರು. ಈಗ ಯಾರಿಗೆ ಬೆಂಗಳೂರು ಉಸ್ತುವಾರಿ ಕೊಟ್ಟರೂ ಅಸಮಾಧಾನ ಆಗುತ್ತೇ ಎಂಬ ಕಾರಣಕ್ಕೆ, ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ತಾವೇ ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿದ್ದಾರೆ.
Comments are closed.