
ಪಟನಾ: ಗೋಮೂತ್ರ ಕ್ಯಾನ್ಸರ್ ನಿವಾರಕ. ಅದನ್ನು ಔಷಧವನ್ನಾಗಿ ಬಳಸುವ ಬಗ್ಗೆ ಆಯುಷ್ ಇಲಾಖೆ ಕೆಲಸ ಮಾಡುತ್ತಿದೆ. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರೂ ಆರೋಗ್ಯದ ಉದ್ದೇಶದಿಂದ ಗೋಮೂತ್ರ ಕುಡಿಯುತ್ತಿದ್ದರು ಎಂದು ಕೇಂದ್ರ ಸಚಿವ ಅಶ್ವಿನಿ ಚೌಬೆ ಹೇಳಿದ್ದಾರೆ.
ಗೋಮೂತ್ರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಶಕ್ತಿಶಾಲಿ. ಹಲವು ಅನಾರೋಗ್ಯ ಸಮಸ್ಯೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಗುಣ ಹೊಂದಿದೆ. ಗೋಮೂತ್ರ ಬಳಸಿ ಕ್ಯಾನ್ಸರ್‌ಗೆ ಔಷಧಿ ತಯಾರಿಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ ಎಂದಿದ್ದಾರೆ.
ಇದರೊಂದಿಗೆ ಅವರು ಗೋಮೂತ್ರ ಬಗ್ಗೆ ಹೆಚ್ಚಿನ ಸಂಶೋಧನೆಯಾಗಬೇಕೆಂದು ಹೇಳಿದರು. ಇದೇ ವೇಳೆ ಅವರು ದೇಶದಲ್ಲಿ ಸಕ್ಕರೆ ಕಾಯಿಲೆ, ಕ್ಯಾನ್ಸರ್ ಹೆಚ್ಚಳವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಇದನ್ನು ಸಂಪೂರ್ಣ ನಿವಾರಣೆ ಮಾಡಲು ಸಾಧ್ಯವಿಲ್ಲ. ಆದರೆ ಹತೋಟಿಗೆ ತರಬಹುದು. ಈ ಬಗ್ಗೆ 2030ರ ವೇಳೆಗೆ ಗುರಿ ಸಾಧನೆಗೆ ಕೇಂದ್ರ ಸರಕಾರ ಉದ್ದೇಶಿಸಿದೆ ಎಂದು ಹೇಳಿದರು.
Comments are closed.