
ನವದೆಹಲಿ: ಡಾಗ್ ಫೈಟ್ನಲ್ಲಿ ಮಿಗ್-21 ಬೈಸನ್ ಮೂಲಕ ಪಾಕಿಸ್ತಾನದ ಅತ್ಯಾಧುನಿಕ ಎಎಫ್-16 ಯುದ್ಧ ವಿಮಾನ ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂಧನ್ ವರ್ಧಮಾನ್, ಇಂದು ಮಿಗ್-21 ನಲ್ಲಿ ಹಾರಾಟ ನಡೆಸಿದ್ದಾರೆ. ಅದೂ ವಾಯುಪಡೆಯ ಮುಖ್ಯಸ್ಥ ಬಿ.ಎಸ್.ಧನೋವಾ ಅವರೊಂದಿಗೆ. ಪಠಾಣ್ಕೋಟ್ ವಾಯುನೆಲೆಯಲ್ಲಿ 11.30 ಗಂಟೆಯಲ್ಲಿ 30 ನಿಮಿಷ ಹಾರಾಟ ನಡೆಸಿದರು.
ಪಠಾಣ್ಕೋಟ್ ಎಎಎಫ್ನ ಮುಂಚೂಣಿ ವಾಯು ನೆಲೆಯಾಗಿದ್ದು, ಐಎಎಫ್ನ 26 ಸ್ಕ್ವಾರ್ಡನ್ ವಿಮಾನಗಳ ನೆಲೆಯಾಗಿದೆ. ಏರ್ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಸಹ ಮಿಗ್-21 ಪೈಲಟ್ ಆಗಿದ್ದು, 1999 ಕಾರ್ಗಿಲ್ ಯುದ್ಧ ಸಮಯದಲ್ಲಿ ಮಿಗ್-21 ಬಳಸಿ ಗಡಿಪ್ರದೇಶದಲ್ಲಿ ಪಾಕಿಸ್ತಾನದ ಅಗತ್ಯ ಸಾಮಗ್ರಿಗಳ ಸರಬರಾಜು ನೆಲೆಗಳನ್ನು ಧ್ವಂಸಗೊಳಿಸಿದ್ದರು. ಕಾರ್ಗಿಲ್ ಯುದ್ಧದಲ್ಲಿ ಭಾರತ ಮೇಲುಗೈ ಸಾಧಿಸಲು ಇದು ಸಾಕಷ್ಟು ನೆರವಾಗಿತ್ತು.
ಎಫ್-16 ಹೊಡೆದುರುಳಿಸಿದ್ದಕ್ಕಾಗಿ ಅಭಿನಂಧನ್ ವೀರಚಕ್ರ ಪುರಸ್ಕಾರ ಪಡೆದಿದ್ದಾರೆ.
Comments are closed.