ರಾಷ್ಟ್ರೀಯ

ದೇಶಾದ್ಯಂತ ಆಚರಿಸಲಾಗುತ್ತಿರುವ ಗಣೇಶ ಚತುರ್ಥಿ ಹಬ್ಬಕ್ಕೆ ಶುಭಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

Pinterest LinkedIn Tumblr

ನವದೆಹಲಿ: ದೇಶಾದ್ಯಂತ ಗೌರಿ-ಗಣೇಶ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಲಾಗುತ್ತಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

“ದೇಶದ ಜನತೆಯ ಜೀವನದಲ್ಲಿ ಸಂತೋಷ, ಸಂವೃದ್ಧಿಯನ್ನು ಕೋರುತ್ತೇನೆ” ಗಣಪತಿ ಬಪ್ಪ ಮೋರ್ಯ! ಗಣೇಶ ಹಬ್ಬದ ದಿನದಂದು ದೇಶದ ಜನತೆಗೆ ಶುಭಾಶಯಗಳು, ಎಲ್ಲರ ಜೀವನದಲ್ಲೂ ಗಣೇಶ ಶಾಂತಿ, ಸಂತೋಷ, ಸಂವೃದ್ಧಿ ತರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಂದು ರಾಷ್ಟ್ರಪತಿ ಕೋವಿಂದ್ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಕೂಡ, ಎಲ್ಲರಿಗೂ ಗಣೇಶ ಚತುರ್ಥಿ ಶುಭಪ್ರದವಾಗಿರಲಿ ಎಂದು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಟ್ವೀಟ್ ಮಾಡಿ ದೇಶದ ಜನತೆಗೆ ಶುಭ ಕೋರಿದ್ದಾರೆ.

Comments are closed.