
ಕೋಳಿಕ್ಕೋಡ್: ಪಾಕಿಸ್ತಾನ ಧ್ವಜ ಹೋಲುವಂತಹ ಬಾವುಟವನ್ನು ಕಾಲೇಜು ಆವರಣದಲ್ಲಿ ಪ್ರದರ್ಶಿಸಿದ ಆರೋಪದ ಮೇಲೆ ಕೋಳಿಕ್ಕೋಡ್ ಜಿಲ್ಲೆಯ ಕಾಲೇಜೊಂದರ 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗುರುವಾರ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಪೆರಂಬರ ಸಿಲ್ವರ್ ಕಾಲೇಜಿನಲ್ಲಿ ನಡೆದ ಯೂನಿಯನ್ ಚುನಾವಣೆ ಹಿನ್ನೆಲೆಯಲ್ಲಿ ಕಾಲೇಜು ಆವರಣದೊಳಗೆ ನಡೆದ ಮೆರವಣಿಗೆಯಲ್ಲಿ ಬಾವುಟ ಹಾರಿಸಿರುವ ಆರೋಪ ಕೇಳಿಬಂದಿದೆ. ಮುಸ್ಲಿಂ ಸ್ಟೂಡೆಂಟ್ಸ್ ಫ್ರಂಟ್(ಎಂಎಸ್ಎಫ್) ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ಪಾಕಿಸ್ತಾನ ಧ್ವಜದ ಮಾದರಿಯ ದೊಡ್ಡ ಬಾವುಟವನ್ನು ಹಾರಿಸಿದ್ದಾರೆ ಎನ್ನಲಾಗಿದೆ.
ಎಂಎಸ್ಎಫ್ ಸಂಘಟನೆಗೆ ಸೇರಿದ ಬಾವುಟವನ್ನು ಹಾರಿಸಿದ್ದೇವೆ. ಧ್ವಜ ದೊಡ್ಡದಾಗಿದ್ದರಿಂದ ಗೊಂದಲ ಉಂಟುಮಾಡಿದೆ ಎಂದು ಸಂಘಟನೆಯ ವಿದ್ಯಾರ್ಥಿಗಳು ಸಮರ್ಥನೆ ನೀಡಿದ್ದಾರೆ.
ವಿದ್ಯಾರ್ಥಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 143,147,153 ಮತ್ತು 149 ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪ ಸಾಬೀತಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
Comments are closed.