
ವಾಷಿಂಗ್ಟನ್: ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸದಿದ್ದರೆ ಭಾರತದ ವಿರುದ್ಧ ಪರಮಾಣು ಯುದ್ಧ ಖಚಿತ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಶ್ವ ಸಮುದಾಯಕ್ಕೆ ಬೆದರಿಕೆಯೊಡ್ಡಿದ್ದಾರೆ.
ಆಂಗ್ಲ ಮಾಧ್ಯಮದೊಂದಿಗೆ ನೀಡಿರುವ ಸಂದರ್ಶನದಲ್ಲಿ, ಒಂದು ವೇಳೆ ವಿಶ್ವ ಸಮುದಾಯ ಕಾಶ್ಮೀರ ಹಾಗೂ ಅಲ್ಲಿನ ಜನರ ಸಮಸ್ಯೆಯನ್ನು ಬಗೆಹರಿಸದಿದ್ದರೆ ಭಾರತದ ವಿರುದ್ಧ ಪರಮಾಣು ಯುದ್ಧ ನಡೆಸುವುದು ಅನಿವಾರ್ಯವಾಗಲಿದ್ದು ಇದರ ಪರಿಣಾಮವನ್ನು ಜಾಗತಿಕ ಸಮುದಾಯ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಭಾರತದ ರಕ್ಷಣಾ ಸಚಿವರು ಪರಮಾಣು ಅಸ್ತ್ರದ ಬಳಕೆಯನ್ನು ಮೊದಲು ಬಳಸುವುದಿಲ್ಲ ಎಂಬ ನೀತಿಯನ್ನು ಪರಿಶೀಲನೆಗೊಳಪಡಿಸುವ ಹೇಳಿಕೆಯು ಪಾಕಿಸ್ತಾನಕ್ಕೆ ಎದರಿಸುವ ತಂತ್ರವಾಗಿದೆ. ಭಾರತವು ಕಾಶ್ಮೀರ ವಿಷಯದಲ್ಲಿ ಮಾತುಕತೆಗೆ ಯಾವುದೇ ಪ್ರತಿಕ್ರಿಯೆ ತೋರುತ್ತಿಲ್ಲ. ಕಣಿವೆ ರಾಜ್ಯದಲ್ಲಿ ಸೇನೆ ಹಿಂತೆಗೆದುಕೊಂಡು ರಕ್ಷಣಾ ಕ್ರಮವನ್ನು ಸಡಿಲಗೊಳಿಸಿದರೆ ಮಾತ್ರ ಮಾತುಕತೆಗೆ ಮುಂದಾಗಬಹುದು ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಪಾಕ್ ನ ರೈಲ್ವೆ ಸಚಿವ ಶೇಖ್ ರಶೀದ್ ಅಹಮದ್, ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಎರಡೂ ರಾಷ್ಟ್ರಗಳ ನಡುವೆ ಯುದ್ಧ ನಡೆಯುವುದಾಗಿ ಭವಿಷ್ಯ ನುಡಿದಿದ್ದರು.
Comments are closed.