
ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದಗಿನಿಂದಲೂ ವರ್ಗಾವಣೆ ದಂಧೆ ಜೋರಾಗಿದೆ. ಭ್ರಷ್ಟರಿಗೆ ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಆರ್‌ಎಸ್‌ಎಸ್ ನಾಯಕರು ಸಿದ್ದಾಂತ, ಶಿಸ್ತು, ಸ್ವಚ್ಛ ಆಡಳಿತ ಎನ್ನುತ್ತಿದ್ದರೂ ಯಡಿಯೂರಪ್ಪ ಸರ್ಕಾರದಲ್ಲಿ ಮಾತ್ರ ವರ್ಗಾವಣೆ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ.
ಯಡಿಯೂರಪ್ಪ ಸರ್ಕಾರದಲ್ಲಿ ಭ್ರಷ್ಟರಿಗೆ ಮಣೆ ಹಾಕುತ್ತಿದ್ದಾರೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಕಳಂಕಿತ ಅಧಿಕಾರಿ ಬಸವರಾಜೇಂದ್ರಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(KIADB) ಸಿಇಒ ಹುದ್ದೆ ನೀಡಲಾಗಿದೆ. ವಿಪರ್ಯಾಸ ಅಂದರೇ ಡಿಮೋಷನ್ ಆಗಿದ್ದ ಅಧಿಕಾರಿಗೆ ಅಕ್ರಮವಾಗಿ ಪ್ರಮೋಷನ್ ನೀಡಲಾಗಿದೆ. ಕೆಲ ದಿನಗಳ ಹಿಂದೆ IASನಿಂದ ಡಿಮೋಷನ್ ಆಗಿದ್ದ ಬಸವರಾಜೇಂದ್ರ ವಿರುದ್ಧ ಎಫ್ಐಆರ್ ಕೂಡಾ ದಾಖಲಾಗಿತ್ತು.
ಇನ್ನೊಂದೆಡೆ ಬಸವರಾಜೇಂದ್ರ ನೇಮಕ ಬಿಜೆಪಿಯಲ್ಲಿ ಮತ್ತಷ್ಟು ಅಸಮಾಧಾನ ಸ್ಫೋಟಗೊಳ್ಳಲು ಕಾರಣವಾಗಿದೆ. ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಗಮನಕ್ಕೆ ತರದೇ ಬಸವ ರಾಜೇಂದ್ರ ನೇಮಕಾತಿ ಮಾಡಲಾಗಿದೆ. ಇದ್ರಿಂದ ಜಗದೀಶ್ ಶೆಟ್ಟರ್ ಬೇಸರಗೊಂಡಿದ್ದಾರೆ.
ಬಿಎಸ್‌ವೈ ಅಧಿಕಾರಕ್ಕೆ ಬಂದಾಗಿನಿಂದಲೂ ಹಲವು ವರ್ಗಾವಣೆಗಳಾಗುತ್ತಿವೆ. ಬಿಜೆಪಿ ಹಲವರ ವಿರೋಧದ ನಡೆವೆಯೂ ಕೆಲವು ಭ್ರಷ್ಟರಿಗೆ ಹುದ್ದೆ ನೀಡಲಾಗುತ್ತಿದೆ. ಹೀಗಾಗಿ ಸಿಎಂ ವಿರುದ್ಧ RSSಗೆ ದೂರು ನೀಡಲು ಹಲವು ಸಚಿವರು ನಿರ್ಧಾರಿಸಿದ್ದಾರೆ ಎನ್ನಲಾಗಿದೆ.
Comments are closed.