ಕರಾವಳಿ

ಗಂಗೊಳ್ಳಿ ಬಳಿ ಕಾರು ಹಾಗೂ ಬೈಕುಗಳೆರಡರ ನಡುವೆ ಅಪಘಾತ: ಓರ್ವ ಸಾವು, ಮೂವರು ಗಂಭೀರ

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ ಸಮೀಪ ಬೈಕುಗಳೆರಡಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ನಾಯಕವಾಡಿಯ ರಾಮ ಮಂದಿರದ ಎದುರು ನಡೆದಿದೆ. ಬೈಕ್ ಸವಾರ ಮೊಹಮ್ಮದ್ ತಾರೀಕ್ (23) ಮೃತ ದುರ್ದೈವಿ.

ತ್ರಾಸಿ ಕಡೆಯಿಂದ ಗಂಗೊಳ್ಳಿ ಕಡೆಗೆ ಬರುತ್ತಿದ್ದ ಬೈಕುಗಳಿಗೆ ಗಂಗೊಳ್ಳಿಯಿಂದ ತ್ರಾಸಿ ಕಡೆ ಹೋಗುತ್ತಿದ್ದ ಕಾರು ಡಿಕ್ಕಿಯಾಗಿದೆ. ಪರಿಣಾಮ ಮಹಮ್ಮದ್ ತಾರಿಕ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದು ಇನ್ನೊಂದು ಬೈಕಿನಲ್ಲಿದ್ದ ನಾಯಕವಾಡಿಯ ನಿವಾಸಿ ರವಿ ಹಾಗೂ ನರಸಿಂಹ ಗಂಭೀರ ಗಾಯಗೊಂಡಿದ್ದಾರೆ. ಕಾರು ಚಾಲಕ ಮೌಲಾನಾ ಆಜ್ಗರ್ ಸಹ ಗಾಯಗೊಂಡಿದ್ದು ಮೂವರು ಗಾಯಾಳುಗಳನ್ನು ಉಡುಪಿ ಆದರ್ಶ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.