
ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ನಾಥ್ ಮತ್ತು ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ನಡುವಿನ ತಿಕ್ಕಾಟ ತಾರಕಕ್ಕೆ ಏರಿದ್ದು, ಸಿಂಧಿಯಾ ಪಕ್ಷ ತೊರೆಯವ ಚಿಂತನೆ ಆರಂಭಿಸಿದ್ದಾರೆ.
ಟಾಪ್ ಕಾಮೆಂಟ್
ಸಚಿನ್ ಪೈಲಟ್, ಸಿಂಧ್ಯಾ ಮುಂತಾದವರು ನೆಹ್ರು ಮನೆತನದ ನಾಯಕತ್ವಕ್ಕೆ ಮೀರಿ ಬೆಳೆಯುವ ಸಾಧ್ಯತೆ ಇದೆ. ಅದಕ್ಕಾಗಿ ಅವರು ಬೆಳೆಯುವಮೊದಲೇ ತಲೆ ಕಡೆಯುವ ವಿಚಾರ ಇರಬಹುದು.
”ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ತಮ್ಮನ್ನು ನೇಮಕ ಮಾಡದೇ ಇದ್ದರೆ ಪರ್ಯಾಯ ಸಾಧ್ಯತೆಗಳ ಬಗ್ಗೆ ಗಮನ ಹರಿಸುತ್ತೇನೆ,” ಎಂದು ಸಿಂಧಿಯಾ ಆಪ್ತರ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ, ”ಸಿಂಧಿಯಾ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡದಿದ್ದರೆ ನನ್ನ 500 ಬೆಂಬಲಿಗರ ಜತೆ ಕಾಂಗ್ರೆಸ್ಗೆ ರಾಜೀನಾಮೆ ನೀಡುತ್ತೇನೆ,” ಎಂದು ಪಕ್ಷದ ಮುಖಂಡ ಅಶೋಕ್ ದಾಂಗಿ ಈಗಾಗಲೇ ಘೋಷಿಸಿದ್ದಾರೆ.
ಇದೆಲ್ಲದರ ನಡುವೆ ಕಮಲ್ನಾಥ್ ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಶುಕ್ರವಾರ ಹೊಸದಿಲ್ಲಿಯಲ್ಲಿ ಭೇಟಿ ಮಾಡಿ, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹುದ್ದೆಗೆ ಕೆಲವು ಹೆಸರುಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇವೇಳೆ, ”ಜ್ಯೋತಿರಾದಿತ್ಯ ಸಿಂಧಿಯಾ ಕೋಪಗೊಂಡಿದ್ದಾರೆ ಎಂದು ನನಗೆ ಅನ್ನಿಸುವುದಿಲ್ಲ. ಸಾಕಷ್ಟು ಸಮಾಲೋಚನೆ ಬಳಿಕವೇ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ. ಯಾರೇ ಅಧ್ಯಕ್ಷರಾದರೂ ಅವರೊಂದಿಗೆ ಕೆಲಸ ಮಾಡಲು ನಾನು ಸಿದ್ಧ,” ಎಂದು ಹೇಳಿದ್ದಾರೆ. ಸದ್ಯ ಕಮಲ್ನಾಥ್ ಅವರೇ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದಾರೆ.
ಸತತ ಅವಮಾನ: ರಾಹುಲ್ ಗಾಂಧಿ ಆಪ್ತರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಆಕ್ರೋಶಕ್ಕೆ ಕಾರಣವಿದೆ. ರಾಜ್ಯದಲ್ಲಿ ಕಳೆದ ಡಿಸೆಂಬರ್ನಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಚುನಾವಣೆಗೆ ಮುನ್ನ ಜ್ಯೋತಿರಾದಿತ್ಯ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು, ನಂತರ ದಿಢೀರ್ ಕಮಲ್ನಾಥ್ ಅವರಿಗೆ ಪಟ್ಟ ಕಟ್ಟಲಾಯಿತು. ಸಿಂಧಿಯಾ ಅವರಿಗೆ ಮಹತ್ವದ ಖಾತೆಗಳನ್ನು ನೀಡಿ, ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗುತ್ತದೆ ಎನ್ನಲಾಗಿತ್ತು. ಅದೂ ಹುಸಿಯಾಗಿದೆ. ಲೋಕಸಭೆ ಚುನಾವಣೆ ವೇಳೆ ಉತ್ತರ ಪ್ರದೇಶದಲೊಲಿ ಬಿಜೆಪಿ ಪ್ರಬಲವಾಗಿರುವ ಪಶ್ಚಿಮ ವಲಯದ ಉಸ್ತುವಾರಿ ನೀಡಲಾಯಿತು, ಆ ರಾಜ್ಯಕ್ಕೆ ಹೆಚ್ಚು ಗಮನ ಕೊಟ್ಟ ಸಿಂಧಿಯಾ ಮಧ್ಯಪ್ರದೇಶದ ಗುನಾ ಕ್ಷೇತ್ರದಲ್ಲಿ ಸೋತರು. ಈಗ 370ನೇ ವಿಧಿ ರದ್ದತಿ ವಿಚಾರದಲ್ಲಿ ಕೇಂದ್ರ ಸರಕಾರವನ್ನು ಹೊಗಳಿದ್ದನ್ನೇ ಮುಂದಿಟ್ಟುಕೊಂಡು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ ನೀಡದೇ ಮತ್ತೆ ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ಸಿಂಧಿಯಾ ಬೆಂಬಲಿಗರಲ್ಲಿ ಮೂಡಿದೆ.
ಇತಿಹಾಸ ಪುನರಾವರ್ತನೆ
ಸರಿಯಾಗಿ 30 ವರ್ಷದ ಹಿಂದೆ ಜ್ಯೋತಿರಾದಿತ್ಯ ಸಿಂಧಿಯಾ ಅವರ ತಂದೆ ಮಾಧವ್ರಾವ್ ಸಿಂಧಿಯಾ ಅವರಿಗೂ ಕಾಂಗ್ರೆಸ್ ಮುಖ್ಯಮಂತ್ರಿ ಹುದ್ದೆ ನೀಡದೇ ಅವಮಾನಿಸಿತ್ತು. ಮುಖ್ಯಮಂತ್ರಿಯಾಗಿದ್ದ ಅರ್ಜುನ್ ಸಿಂಗ್ 1989ರಲ್ಲಿ ಹಗರಣವೊಂದರಲ್ಲಿ ಸಿಲುಕಿ ರಾಜೀನಾಮೆ ನೀಡಬೇಕಾಯಿತು. ಆಗ ಮಾಧವರಾವ್ ಅವರನ್ನೇ ಸಿಎಂ ಆಗಿ ನೇಮಕ ಮಾಡಲಾಗುತ್ತದೆ ಎಂಬ ಸಂದೇಶ ಪಕ್ಷದ ಕೆಲವು ಹಿರಿಯ ನಾಯಕರಿಂದ ರವಾನೆಯಾಗಿತ್ತು. ಕೊನೆಗೆ ಮೋತಿಲಾಲ್ ವೋರಾ ಮುಖ್ಯಮಂತ್ರಿಯಾದರು. ಜ್ಯೋತಿರಾದಿತ್ಯ ಅವರನ್ನೂ ಅದೇರೀತಿ ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗುತ್ತಿದೆ.
Comments are closed.