ರಾಷ್ಟ್ರೀಯ

7 ವರ್ಷದ ನಂತರ ಭಾರೀ ಕುಸಿತ ಕಂಡ ಜಿಡಿಪಿ

Pinterest LinkedIn Tumblr


ಹೊಸದಿಲ್ಲಿ: ಕೇಂದ್ರ ಸಂಖ್ಯಾಶಾಸ್ತ್ರ ಕಚೇರಿ ಇಂದು ಬಿಡುಗಡೆ ಮಾಡಿದ ಭಾರತದ ತ್ತೈಮಾಸಿಕ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ)ದ ಬೆಳವಣಿಗೆ ಶೇ. 5.08ರಿಂದ ಶೇ. 5ಕ್ಕೆ ಕುಸಿದಿದೆ. ಕಳೆದ ತ್ತೈಮಾಸಿಕದ ಜಿಡಿಪಿಗೆ ಹೋಲಿಸಿದರೆ ಶೇ. 0.8ರಷ್ಟು ಜಿಡಿಪಿ ಕುಸಿತಗೊಂಡಿದೆ.

ಇತ್ತೀಚಿನ ಕೆಲವು ತಿಂಗಳುಗಳಿಂದ ದೇಶದ ಒಟ್ಟು ಉತ್ಪಾದನ ವಲಯ ಕುಸಿತದತ್ತ ಸಾಗಿದೆ. ಉತ್ಪನ್ನಗಳು ಬೇಡಿಕೆ ಕಳೆದುಕೊಂಡಿರುವ ಕಾರಣ ಮಾರುಕಟ್ಟೆ ವಲಯ ಹಿಡಿತ ಕಳೆದುಕೊಂಡಿದೆ. ಹಲವು ಪ್ರಮುಖ ಉದ್ಯಮ ಸಂಸ್ಥೆಗಳು ತನ್ನ ಉತ್ಪಾದನೆಯ ಪ್ರಮಾಣವನ್ನು ಕಡಿಗೊಳಿಸಿದ್ದು, ಇದು ಉದ್ಯೋಗ ಕ್ಷೇತ್ರದತ್ತ ಪರಿಣಾಮ ಬೀರಿದೆ.

ಈ ಜಿಡಿಪಿ ಕುಸಿತಕ್ಕೆ ಉತ್ಪಾದನಾ ವಲಯ ಮತ್ತು ಖಾಸಗಿ ವಲಯದ ನಷ್ಟ ಕಾರಣವಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಜಿಡಿಪಿ ಶೇ. 7.8ರಷ್ಟಿತ್ತು. ಇದು 7 ವರ್ಷಗಳ ಅತ್ಯಂತ ಕಳಪೆ ಜಿಡಿಪಿಯಾಗಿದೆ.

ಸೂಚನೆ ಇತ್ತು
ಭಾರತದ ಜಿಡಿಪಿ ಕುಸಿತಗೊಳ್ಳುತ್ತಿರುವುದರ ಸೂಚನೆಯನ್ನು ಈಗಾಗಲೇ ಹಲವು ಸಂಸ್ಥೆಗಳು ನೀಡಿದ್ದವು. ಕುಸಿತದತ್ತ ಮುಖ ಮಾಡುತ್ತಿರುವ ಜಿಡಿಪಿಯನ್ನು ಉತ್ತಮ ಪಡಿಸಲು ಕೇಂದ್ರ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಯಾವುದೂ ಫಲಕೊಡಲಿಲ್ಲ.7 ವರ್ಷಗಳ ಈ ಕಳೆಪೆ ಪ್ರಮಾಣದ ಜಿಡಿಪಿ ಕುಸಿತ ಕೆಂದ್ರ ಸರಕಾರಕ್ಕೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ.

Comments are closed.