ಕರ್ನಾಟಕ

ಇಡಿ ಬಂಧನದಿಂದ ಮಧ್ಯಂತರ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ವಜಾ; ಬಂಧನದ ಭೀತಿಯಲ್ಲಿ ಡಿ.ಕೆ.ಶಿವಕುಮಾರ್

Pinterest LinkedIn Tumblr

ಬೆಂಗಳೂರು: ಇಡಿ ಅಧಿಕಾರಿಗಳು ಬಂಧಿಸುವ ಭೀತಿಯಿಂದ ಮಧ್ಯಂತರ ರಕ್ಷಣೆ ಕೋರಿದ್ದ ಅರ್ಜಿಯನ್ನೂ ಹೈಕೋರ್ಟ್ ವಜಾಗೊಳಿಸಿದೆ. ಹೀಗಾಗಿ ಮಾಜಿ ಸಚಿವ ಅವರಿಗೆ ಬಂಧನದ ಭೀತಿ ಹೆಚ್ಚಿದೆ.

ಸಮನ್ಸ್ ಜಾರಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಆದೇಶಕ್ಕೆ ತಡೆ ನೀಡಲು ಅಥವಾ ತೀರ್ಪು ಜಾರಿ ಮುಂದೂಡಲಾಗದು. ಇಡಿ ಅಧಿಕಾರಿಗಳ ಬಂಧನದಿಂದ ರಕ್ಷಣೆ ನೀಡಲು ಹೈಕೋರ್ಟ್‌ನಿಂದ ಸಾಧ್ಯವಿಲ್ಲ. ಡಿಕೆಶಿ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಬೇಕು ಇಲ್ಲವೇ ಇಡಿ ಮುಂದೆ ಹಾಜರಾಗಿ ಕಾಲಾವಕಾಶ ಕೋರಬೇಕು, ಎಂದು ನ್ಯಾಯಮೂರ್ತಿ ಅರವಿಂದ್ ಕುಮಾರ್ ಹೇಳಿದ್ದಾರೆ.

ಇಂದು ಜಾರಿ ನಿರ್ದೇಶನಾಲಯಲ್ಲಿ ವಿಚಾರಣೆಗೆ ಹಾಜರಾಗಲಿರುವ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಡಿ ಕೆ ಶಿವಕುಮಾರ್‌ ಬಂಧನದ ಭೀತಿಯಿಂದ ಮುಂಜಾಗ್ರತೆಯಾಗಿ ಮಧ್ಯಂತರ ರಕ್ಷಣೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆಗೆ ಮುಗಿದ ಬಳಿಕ ಬಂಧನದ ಸಾಧ್ಯತೆ ಇರುರುವುದರಿಂದ ಮಧ್ಯಂತರ ರಕ್ಷಣೆ ನೀಡಬೇಕೆಂಬುದು ಅವರ ಪರ ವಕೀಲರ ಕೋರಿದ್ದರು. ವಿಚಾರಣೆ ನಡೆಸಿದ ಕೋರ್ಟ್ ರಕ್ಷಣೆ ನೀಡಲಾಗದು ಎಂದು ಹೇಳಿದೆ.

Comments are closed.