ರಾಷ್ಟ್ರೀಯ

ಪ್ರತಿನಿತ್ಯ ಮಧ್ಯರಾತ್ರಿ ರಹಸ್ಯವಾಗಿ ಸೇರುತ್ತಿದ್ದ ಜೋಡಿಗೆ ಮದುವೆ

Pinterest LinkedIn Tumblr


ಪಾಟ್ನಾ: ಈ ಜೋಡಿ ನಿತ್ಯ ಮಧ್ಯರಾತ್ರಿ ರಹಸ್ಯವಾಗಿ ಸೇರುತ್ತಿತ್ತು.ಅವರದೇ ಲೋಕದಲ್ಲಿ ತೇಲಾಡುತ್ತಿದ್ದರು. ತಮ್ಮ ಖಾಸಗಿ ಭೇಟಿಗೆ ಯಾರ ಭಯವಿಲ್ಲ ಎಂದೇ ಭಾವಿಸಿದ್ದ ಜೋಡಿಗೆ ಅದೊಂದು ದಿನ ಶಾಕ್ ಕಾದಿತ್ತು.
ದಿನನಿತ್ಯ ಪ್ರಣಯ ಪಕ್ಷಿಗಳ ಭೇಟಿಯನ್ನು ಗಮನಿಸುತ್ತಿದ್ದ ಊರಿನ ಗ್ರಾಮಸ್ಥರು ರಾತ್ರೋರಾತ್ರಿ ತಾವೆ ನಿಂತು ಮದುವೆ ಮಾಡಿಸಿಬಿಟ್ಟರು.ಈ ಘಟನೆ ನಡೆದಿದ್ದು ಬಿಹಾರದ ಮೋತಿಹಾರಿ ಜಿಲ್ಲೆಯ ಕೋನಿಯಾ ಗ್ರಾಮದಲ್ಲಿ.

ಯುವಜೋಡಿಯನ್ನು ಹಿಡಿಯುವ ಸಲುವಾಗಿಯೇ ನೂರಾರು ಗ್ರಾಮಸ್ಥರು ಒಂದು ಕಡೆ ಜಮಾಯಿಸಿದ್ದರು. ಜನರು ತಮ್ಮ ಸಮೀಪ ಬರುತ್ತಿರುವುದನ್ನು ಗಮನಿಸಿದ ಪ್ರೇಮಿಗಳು ಓಡಿಹೋಗಲು ಯತ್ನಿಸಿದ್ದಾರೆ. ಆದರೂ ಪಟ್ಟುಬಿಡದ ಗ್ರಾಮಸ್ಥರು ಪರಾರಿಯಾಗುತ್ತಿದ್ದ ಜೋಡಿಯನ್ನು ಹಿಡಿದು ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಪುರೋಹಿತನನ್ನು ರಾತ್ರಿಯಲ್ಲಿಯೇ ಸ್ಥಳಕ್ಕೆ ಕರೆಸಿ ಸಂಪ್ರದಾಯ ಬದ್ಧವಾಗಿ ವಿವಾಹ ಕಾರ್ಯ ನೆರವೇರಿಸಿದ್ದಾರೆ.

ಮದುವೆಗೆ ಒಬ್ಬರಿಗೊಬದಬರು ಸಮ್ಮತಿಸಿದ್ದು ವಿಶೇಷ. ಈ ವಿಷಯ ಪೊಲೀಸರಿಗೆ ಗೊತ್ತಾದರೂ ಅವರು ಬರುವ ಹೊತ್ತಿಗೆ ಮದುವೆ ನಡೆದು ಹೋಗಿತ್ತು.

Comments are closed.