
ಬೆಂಗಳೂರು: ವಯಸ್ಸಾದ ತಂದೆ ತಾಯಿಯನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳುವ ಅದೆಷ್ಟೋ ಉದಾಹರಣೆಗಳಿವೆ. ಆದರೆ ಇಬ್ಬರು ಮಕ್ಕಳು ಆಸ್ತಿಗಾಗಿ ತಂದೆಯನ್ನು ಮನೆಯಿಂದ ಹೊರಹಾಕಿರುವ ಘಟನೆ ನಡೆದಿದೆ.
ಲಗ್ಗೆರೆಯ ಕಾವೇರಿನಗರದ ನಿವಾಸಿ ವೃದ್ದ ನರಸಿಂಹಯ್ಯ (75) ಈಗ ನಡು ಬೀದಿಯಲ್ಲಿ ಮಲಗುವ ಪರಿಸ್ಥಿತಿ ಬಂದಿದೆ. ನರಸಿಂಹಯ್ಯನಿಗೆ ನಾಗರಾಜ್ ಮತ್ತು ರಾಘವೇಂದ್ರ ಅಂತ ಇಬ್ಬರು ಮಕ್ಕಳು. ನರಸಿಂಹಯ್ಯ ತನ್ನ ಬಳಿಯಿದ್ದ ಹಣದಿಂದ ಸ್ವಂತ ಮನೆ ಕಟ್ಟಿಸಿದ್ದು, ಅದರಲ್ಲೇ ವಾಸವಾಗಿದ್ದರು. ಯಾವಾಗ ತಂದೆಗೆ ಸ್ಟ್ರೋಕ್ ಆಯ್ತೋ ಅವರಿಗೆ ಹಿಂಸೆ ಕೊಟ್ಟು , ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ದಿನಕಳೆದಂತೆ ಇಬ್ಬರೂ ಮಕ್ಕಳು ತಂದೆನ ಬಿಟ್ಟು ಬೇರೆಡೆ ಮನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಂದೆ ಕಟ್ಟಿಸಿದ ಮನೆಯನ್ನೂ ಕೂಡಾ ಗೊತ್ತಾಗದಂತೆ ಬೇರೆಯವರಿಗೆ ಬಾಡಿಗೆಗೆ ಕೊಟ್ಟು, ಅದನ್ನೂ ಬೀಗ ಹಾಕಿ ಹೊರದಬ್ಬಿದ್ದಾರೆ.
ಇನ್ನು ತಿನ್ನಲು ಊಟವಿಲ್ಲದೆ ಮಲಗಲೂ ಜಾಗವಿಲ್ಲದೆ. ಮನೆ ಮುಂದೆಯೇ ಒದ್ದಾಡುವಂಥಾಗಿದೆ ತಂದೆ ಪರಿಸ್ಥಿರಿ. ಇದನ್ನು ನೋಡಿದ ಲಗ್ಗೆರೆಯ ಅಕ್ಕ ಪಕ್ಕ ಜನ ಚಳಿಯಲ್ಲಿ ನಡುಗುತ್ತಿದ್ದ ವೃದ್ಧನಿಗೆ ಬ್ಲಾಂಕೇಟ್ ಹೊದಿಸಿ, ತಿಂಡಿ ನೀಡಿದ್ದಾರೆ.
ಈ ನಡುವೆ ಮಕ್ಕಳ ಜೊತೆ ಹೋಗಿರೋ ಪತ್ನಿಗೆ ಪತಿ ಕೂಡಾ ಬೇಡವಾಗಿದ್ದಾರೆ. ಇಬ್ಬರು ಮಕ್ಕಳು ಸಾಫ್ಟ್ ವೇರ್ ಇಂಜಿನಿಯರ್ಗಳು. ಲಕ್ಷಾಂತರ ರೂಪಾಯಿ ಸಂಬಳ ಕೂಡ ತೆಗೆದುಕೊಳ್ಳುತ್ತಾರೆ. ಹೆತ್ತು ಹೊತ್ತು ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ದೊಡ್ಡವರನ್ನಾಗಿ ಮಾಡಿದ ತಪ್ಪಿಗೆ ತಂದೆ ಮನೆಯಿಂದ ಹೊರ ಹಾಕಿರೋದು ವಿಪರ್ಯಾಸದ ಸಂಗತಿ. ಸದ್ಯ ನಂದಿನಿ ಲೇಔಟ್ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಮಕ್ಕಳನ್ನ ಸಂಪರ್ಕ ಮಾಡಲು ಮುಂದಾಗಿದ್ದಾರೆ.
Comments are closed.