
ಚಾಲೆಂಜಿಂಗ್ ಸ್ಟಾರ್ ದರ್ಶನ್ 50ನೇ ಸಿನಿಮಾ ಮುನಿರತ್ನ ಕುರುಕ್ಷೇತ್ರ ಹೊಸ ದಾಖಲೆ ಬರೆದಿದೆ. ಮೊದಲ ವಾರದಲ್ಲೇ 35 ಕೋಟಿ ರೂ ಕಲೆಕ್ಷನ್ ಮಾಡಿದ್ದ ಕುರುಕ್ಷೇತ್ರ ಮೂರು ವಾರದಲ್ಲಿಯೇ ನೂರು ಕೋಟಿ ಕ್ಲಬ್ಗೆ ಸೇರಿದೆ. ಹೀಗಾಗಿ 100 ಕೋಟಿ ಎಂದು ಬರೆದಿರೋ ಕೇಕ್ನ್ನ ದರ್ಶನ್ ಕತ್ತರಿಸಿ ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಅಂದಹಾಗೇ ನಿರ್ಮಾಪಕ ಮುನಿರತ್ನ ನಿರ್ಮಾಣದ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದುರ್ಯೋಧನನನಾಗಿ ಅಬ್ಬರಿಸಿದ್ರೆ, ನಿಖಿಲ್ ಅಭಿಮನ್ಯು ಪಾತ್ರಾಧಾರಿಯಾಗಿ ಬಣ್ಣ ಹಚ್ಚಿದ್ರೆ, ರವಿಚಂದ್ರನ್ ಕೃಷ್ಣನಾಗಿ, ಅರ್ಜುನ್ ಸರ್ಜಾ ಕರ್ಣನಾಗಿ ಕಾಣಿಸಿಕೊಂಡಿದ್ರು. ಇನ್ನು, ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿತ್ತು. ಈ ಬಹುಕೋಟಿ ವೆಚ್ಚದ ಚಿತ್ರಕ್ಕೆ ನಾಗಣ್ಣ ನಿರ್ದೇಶನ ಮಾಡಿದ್ದಾರೆ.
Comments are closed.