ಕರಾವಳಿ

ಅನಾರೋಗ್ಯದಿಂದ ಬಳಲುತ್ತಿದ್ದ ಕುಂದಾಪುರ ಠಾಣೆ ಮಹಿಳಾ ಸಿಬ್ಬಂದಿ ನಿಧನ

Pinterest LinkedIn Tumblr

ಕುಂದಾಪುರ: ಕಳೆದ ಎರಡು ವರ್ಷದಿಂದ ಕುಂದಾಪುರ ಟೌನ್ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೆಬಲ್ ಆಗಿ ವೃತ್ತಿ ನಿರ್ವಹಿಸುತ್ತಿದ್ದ ಶಾರದಾ ಜೆ.ಗೌಡ (29) ಸ್ಪಲ್ಪಕಾಲದ ಅಸೌಖ್ಯದಿಂದ ಮಂಗಳೂರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.

ಮೃತರು 2010-11ಸಾಲಿನ ಬ್ಯಾಚ್‌ನವರಾಗಿದ್ದು, ಉಡುಪಿ ಮಹಿಳಾ ಠಾಣೆಯಲ್ಲಿ ಕರ್ತವ್ಯ ನಿರ್ವಹಸಿ, ಕುಂದಾಪುರ ಟೌನ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಅವಿವಾಹಿತರಾದ ಶಾರದಾ ಗೌಡ ಹೊನ್ನಾವರ ಚಂದ್ರಾಣಿಯವರಾಗಿದ್ದು, ಮೃತರ ಅಂತಿಮ ಸಂಸ್ಕಾರ ಹುಟ್ಟೂರಿನಲ್ಲಿ ಸಕಲ ಪೊಲೀಸ್ ಗೌರವದೊಂದಿಗೆ ನೆರವೇರಲಿದೆ ಎಂದು ತಿಳಿದುಬಂದಿದೆ.

Comments are closed.