
ಬೆಳಗಾವಿ (ಆ.28): ನಗರದಲ್ಲಿ ಯುವತಿಯೊಬ್ಬಳು ನಗ್ನವಾಗಿ ಬೈಕ್ ಓಡಿಸಿದ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ತನಿಖೆ ವೇಳೆ ಬೈಕ್ ಓಡಿಸಿದ್ದು ಯುವತಿ ಅಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಬೆಳಗಾವಿಯ ಜನ ನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ನಗ್ನವಾಗಿ ಬೈಕ್ ಓಡಿಸುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಮೂಲಕ ಸೆರೆ ಹಿಡಿದಿದ್ದರು. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಸಾಕಷ್ಟು ಆಕ್ಷೇಪ ವ್ಯಕ್ತವಾಗಿತ್ತು.
ಹೀಗಾಗಿ, ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬೈಕ್ನಲ್ಲಿ ನಗ್ನವಾಗಿ ತೆರಳಿದ್ದು ಯುವತಿ ಅಲ್ಲ ತೃತೀಯ ಲಿಂಗಿ ಎನ್ನುವ ವಿಚಾರ ಗೊತ್ತಾಗಿದೆ.
ಕುಡಿದ ಅಮಲಲ್ಲಿ ತೃತಿಯಲಿಂಗಿ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಅವರು ಬೆಳಗಾವಿಯವರೇ ಆಗಿದ್ದು, ಅಲ್ಲಿಯೇ ವಾಸವಾಗಿದ್ದಾರಂತೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಅವರು ಬೆಳಗಾವಿ ತೊರೆದಿದ್ದಾರೆ. ಅವರಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಕಾಡಿದ್ದ ಅನುಮಾನ:
ಸ್ಕೂಟಿಯ ಹಿಂಬದಿಯಲ್ಲಿ ವೈಕ್ತಿ ಬೆತ್ತಲಾಗಿ ಕುಳಿತಿದ್ದರು. ನಂತರ ಮುಂದೆ ಕುಳಿತಿದ್ದ ಯುವಕನನ್ನು ಕೆಳಗಿಳಿಸಿ ತಾನೇ ರೈಡ್ ಮಾಡಿಕೊಂಡು ಹೋಗಿದ್ದರು. ಈ ದೃಶ್ಯವನ್ನು ಕಟ್ಟಡದ ಮೇಲಿದ್ದ ಕೆಲ ಸಾರ್ವಜನಿಕರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದು, ಬಳಿಕ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದರು. ಈ ಘಟನೆ ಬೆಳಗಾವಿಯಲ್ಲಿ ನಡೆದಿದೆಯೋ ಅಥವಾ ಬೇರೆ ಪ್ರದೇಶದಲ್ಲಿ ನಡೆದ ವಿಡಿಯೋವನ್ನು ಬೆಳಗಾವಿಯಲ್ಲಿ ನಡೆದಿದೆ ಎಂದು ಬಿಂಬಿಸಲಾಗಿತ್ತೋ ಎನ್ನುವ ಗೊಂದಲ ಪೊಲೀಸರನ್ನು ಕಾಡಿತ್ತು. ತನಿಖೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
Comments are closed.