
ಮಂಗಳೂರು : ಮಾತಾ ಅಮೃತಾನಂದಮಯಿ ಮಠದ ಅಮಲ ಭಾರತ ಯೋಜನೆಯನ್ವಯ ಎಂಆರ್ ಪಿಎಲ್ ಸಹಯೋಗದಲ್ಲಿ ನಡೆಯುತ್ತಿರುವ ಈ ವರ್ಷದ 126ನೆ ಸ್ವಚ್ಛತಾ ಕಾರ್ಯಕ್ರಮ ಮಂಗಳೂರಿನ ಕುಲಶೇಖರದ ಕರ್ನಾಟಕ ಗೃಹ ಮಂಡಳಿಯ ವಸತಿ ಸಂಕೀರ್ಣದ ಪರಿಸರದಲ್ಲಿ ನಡೆಯಿತು.
ಮಾತಾ ಅಮೃತಾನಂದಮಯಿ ಮಠದ ಮಂಗಳೂರು ಶಾಖೆಯ ಮುಖ್ಯಸ್ಥೆ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಜಿ ಮೇಯರ್ ಭಾಸ್ಕರ ಕೆ ಇವರು ಶುಚಿತ್ವದ ಅಭಿಯಾನಕ್ಕೆ ಚಾಲನೆ ನೀಡಿದರು.
ಗೌರವಾಧ್ಯಕ್ಷರಾದ ಡಾ ಜೀವರಾಜ ಸೊರಕೆ ಅವರು ಸ್ವಚ್ಛತೆಯ ಬಗ್ಗೆ ಅರಿವನ್ನು ಮೂಡಿಸುವ ಪ್ರಾಸ್ತಾವಿಕ ಮಾತನ್ನಾಡಿದರು. ಮಂದಾರ ತ್ಯಾಜ್ಯ ದುರಂತ ಇದು ಬಹಳ ದುಃಖಕರ ವಿಷಯ ಇದು ಬಹಳ ನೋವನ್ನು ತಂದಿದೆ ನಾವೆಲ್ಲರೂ ಸಂತ್ರಸ್ತರ ಜೊತೆಗಿದ್ದೇವೆ ಮತ್ತು ಶಾಶ್ವತ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಜೊತೆ ಮಾತಾ ಅಮೃತಾನಂದಮಯಿ ಮಠದ ಮಂಗಳೂರು ಶಾಖೆಯ ಮುಖ್ಯಸ್ಥರು ಮತ್ತು ಅಮಲ ಭಾರತ ಯೋಜನೆಯ ಮುಖ್ಯಸ್ಥರು ಮತ್ತು ಸರ್ವ ಸದಸ್ಯರು ಕೂಡ ಮಾತನಾಡಿದ್ದೇವೆ ಎಂದು ಹೇಳಿದರು.
ಸೇವಾ ಸಮಿತಿಯ ಅಧ್ಯಕ್ಷರಾದ ಡಾ ವಸಂತ ಕುಮಾರ್ ಪೆರ್ಲ ಈ ಸಂದರ್ಭದಲ್ಲಿ ಮಾತನಾಡಿ ಮಂದಾರ ದುರಂತ ಸಂತ್ರಸ್ತರಿಗೆ ಸಾಂತ್ವನದ ಮಾತುಗಳನ್ನಾಡಿದರು.
ಸಂತ್ರಸ್ತರ ಪರವಾಗಿ ಮಾತನಾಡಿದ ಮಂದಾರ ರಾಜೇಶ್ ಭಟ್ಟರು ಇದು ಒಂದು ಮಾನವ ನಿರ್ಮಿತ ವಿಕೋಪ ,ಇನ್ನು ಮುಂದಾದರೂ ಆಡಳಿತ ನಡೆಸುವವರು ದಯವಿಟ್ಟು ಜನರ ಬಗ್ಗೆ ಕಾಳಜಿ ಮತ್ತು ಜಾಗೃತಿಯನ್ನು ವಹಿಸಬೇಕಾದ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ವಾಮಂಜೂರಿನ ಸೈಂಟ್ ರೇಮಂಡ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಭಾಗವಹಿಸಿದ್ದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಪ್ರೊಫೆಸರ್ ವಿನುತಾ ರೈ, ಸಂಯೋಜಕರಾದ ಸುರೇಶ್ ಅಮೀನ್, ಕಾರ್ಯಕರ್ತರಾದ ಸುಗುಣ, ರಾಜನ್ ಹಾಗೂ ಸೈಂಟ್ ರೇಮಂಡ್ಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ನಿರಾಶ್ರಿತರ ಕುಟುಂಬದವರು ಉಪಸ್ಥಿತರಿದ್ದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಪದಾಧಿಕಾರಿ ಡಾಕ್ಟರ್ ದೇವದಾಸ ಪುತ್ರನ್ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು.
Comments are closed.