
ಮಂಗಳೂರು : ಮಂಗಳೂರಿನ ಮಾಜಿ ಫುಟ್ಬಾಲ್ ಆಟಗಾರರ ವತಿಯಿಂದ ಮಾಜಿ ಖ್ಯಾತ ಫುಟ್ಬಾಲ್ ಆಟಗಾರರ ಸ್ನೇಹಕೂಟ ಕಾರ್ಯಕ್ರಮವು ನಗರದ ಓಷಿಯನ್ ಪರ್ಲ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅಗಲಿದ ಗಣ್ಯ 48 ಅತ್ಯುತ್ತಮ ಆಟಗಾರರನ್ನು ಸ್ಮರಿಸಿ, ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಖ್ಯಾತ ಹಿರಿಯ ಮಾಜಿ ಫುಟ್ಬಾಲ್ ಆಟಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸ್ಪೋರ್ಟಿಂಗ್ ತಂಡದ ಅತ್ಯುತ್ತಮ ಆಟಗಾರ, ಕೇರಳ ಸ್ಟೇಟ್ ಫುಟ್ಬಾಲ್ ತಂಡದ ತರಬೇತುದಾರ ಪಿ.ಸಿ.ಆಸಿಫ್ ಅವರು, ಹಲವರು ವರ್ಷಗಳ ಹಿಂದೆ ಬ್ರಿಟಿಷರಿಂದ ಕಲಿತಂತಹ ಈ ಆಟದಿಂದ ಮಂಗಳೂರಿಗೆ ಅನೇಕ ಕೀರ್ತಿಯನ್ನು ನೀಡಿದೆ. ವಿಶೇಷವಾಗಿ ಸಂತೋಷ್ ಟ್ರೋಫಿ, ಇಂಡಿಯನ್ ಏರ್ ಫೋರ್ಸ್, ಮಹಾರಾಷ್ಟ್ರ ಯೂನಿಯನ್ ಬ್ಯಾಂಕ್, ಕೇರಳ ಸ್ಟೇಟ್ ನಲ್ಲಿ ಪ್ರತಿನಿಧಿಸಿದ ಅತ್ಯುತ್ತಮ ಆಟಗಾರರನ್ನು ಜಿಲ್ಲೆಗೆ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಹ್ತಿಶಾಮ್ ಪಿ.ಸಿ. ಅನುವಾದಿಸಿದರು.

ಮಾಜಿ ಫುಟ್ಬಾಲ್ ಆಟಗಾರ ಅಬ್ದುಲ್ಲಾ ವಂದಿಸಿದರು. ಕಾರ್ಯಕ್ರಮದ ಸಂಘಟಕರಾದ ನಿಯಾಝ್ ಎ.ಕೆ., ಪಿ.ಪಿ.ಅಬ್ದುಲ್ ಮಜೀದ್, ಅಬ್ದುಲ್ಲಾ ಬಿ, ಭಾಸ್ಕರ್ ಬೆಂಗ್ರೆ, ಪಿ.ಸಿ. ಆಸಿಫ್, ಕಾಸಿಂ ಕಂದಕ್, ಸಲಾಂ ಕಂದಕ್, ಮುಸ್ತಫ ಬೋಲಾರ್ ಉಪಸ್ಥಿತರಿದ್ದರು.
Comments are closed.