ರಾಷ್ಟ್ರೀಯ

ಈತನ ಹೊಟ್ಟೆಯಲ್ಲಿ 4 ಕೆ.ಜಿ ಲೋಹದ ವಸ್ತುಗಳು: ವೈದರೇ ಶಾಕ್​

Pinterest LinkedIn Tumblr


ಅಹಮದಾಬಾದ್​ನಲ್ಲಿ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ವ್ಯಕ್ತಿಯೊಬ್ಬನ ಹೊಟ್ಟೆಯೊಳಗೆ 4 ಕೆ.ಜಿ ಲೋಹದ ವಸ್ತುಗಳ ಪತ್ತೆಯಾಗಿದ್ದು, ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

28 ವರ್ಷದ ವ್ಯಕ್ತಿ ಹೊಟ್ಟೆ ನೋವಿನಿಂದ ಅಹಮದಾಬಾದ್​ ಸಿವಿಲ್​ ಹಾಸ್ಟಿಟಲ್​​ನಲ್ಲಿ ದಾಖಲಾಗಿದ್ದಾನೆ, ಈ ವೇಳೆ ವೈದ್ಯರು ಆತನನ್ನು ಸ್ಕ್ಯಾನಿಂಗ್​​​ಗೆ​​ ಒಳಪಡಿಸಿದ್ದಾರೆ. ಸ್ಕ್ಯಾನಿಂಗ್​ ರಿಪೋರ್ಟ್​ ನೋಡಿದ ವೈದ್ಯರು, ವ್ಯಕ್ತಿಯ ಹೊಟ್ಟೆಯೊಳಗಿದ್ದ ಲೋಹದ ವಸ್ತುಗಳನ್ನು ಕಂಡು ಅಚ್ಚರಿಗೊಂಡಿದ್ದಾರೆ.

ವ್ಯಕ್ತಿಯ ಹೊಟ್ಟೆಯೊಳಗೆ ಲೋಹದ ವಸ್ತುಗಳಿವೆ ಎಂದು ಗಮನಿಸಿದ ವೈದರು ಆಪರೇಷನ್​ ಮಾಡಲು ಮುಂದಾಗಿದ್ದಾರೆ. 4 ತಂಡಗಳ ಮೂಲಕ 3 ಗಂಟೆಗಳ ಕಾಲ ಆಪರೇಷನ್​ ನಡೆಸಿ ವ್ಯಕ್ತಿಯ ಹೊಟ್ಟೆಯೊಳಗಿಂದ 452 ಲೋಹದ ವಸ್ತುಗಳನ್ನು ಹೊರತೆಗೆದಿದ್ದಾರೆ. ನೇಲ್​ ಕಟ್ಟರ್​, ಸೇಫ್ಟಿ ಪಿನ್​, ನಟ್​- ಬೋಲ್ಟ್​ ಹಾಗೂ ನಾಣ್ಯಗಳನ್ನು ಈ ವ್ಯಕ್ತಿಯು ಹೊಟ್ಟೆಯಿಂದ ಹೊರತೆಗೆದಿದ್ದಾರೆ.

ಇನ್ನು ವೈದ್ಯರ ಪರೀಕ್ಷೆಯ ವೇಳೆ ಈ ವ್ಯಕ್ತಿ ಸ್ಕಿಜೋಫ್ರೇನಿಯಾ ಸಮಸ್ಯೆಯಿಂದ ಬಳುತ್ತಿದ್ದಾನೆ ಎಂದು ತಿಳಿದುಬಂದಿದೆ. ಆಹಾರವಾಗಿ ಈತ ಲೋಹದ ವಸ್ತುಗಳನ್ನು ತಿನ್ನುತ್ತಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

Comments are closed.