
ದೇಶದಲ್ಲಿ ಜನಸಂಖ್ಯೆ ಕಾಲ ಕ್ರಮೇಣ ಹೆಚ್ಚಾಗುತ್ತಿದೆ. ಜನಸಂಖ್ಯೆ ನಿಯಂತ್ರಣ ಮಾಡಲು ಮೂವರು ಮಕ್ಕಳ ಪೋಷಕರು ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಲು ಅನರ್ಹ, ಎಂದು ಸುಪ್ರೀಂಕೋರ್ಟ್ ಕಳೆದ ವರ್ಷ ಮಹತ್ತರ ತೀರ್ಪು ನೀಡಿದೆ.
ಸುಪ್ರೀಂಕೋರ್ಟ್ ತಂದಿರುವ ಕಾನೂನಿಗೆ ಪುಡಿಗಾಸು ಬೆಲೆ ಕೊಡದೆ, ಹೈದರಾಬಾದ್ ಮಹಾನಗರ ಪಾಲಿಕೆಯಲ್ಲಿ ಟಿಆರ್‍ಎಸ್‍ಗೆ ಸೇರಿದ ಕಚೆಗುಡ ಕಾರ್ಪೋರೇಟರ್ ‘ಎಕ್ಕಲ ಚೈತನ್ಯ ಕಣ್ಣ’ ಎನ್ನುವವರು ಮೂರು ಮಕ್ಕಳ ತಾಯಿಯಾಗಿದ್ದರೂ, ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ಅಫಿಡವಿಟ್‍ನಲ್ಲಿ ತಮಗೆ ಕೇವಲ ಇಬ್ಬರು ಮಕ್ಕಳಿದ್ದಾರೆ ಎಂದು ಉಲ್ಲೇಖಿಸಿದ್ದರು.
ಮಾಜಿ ಕಾರ್ಪೋರೇಟರ್ ಮತ್ತು ಬಿಜೆಪಿ ಮುಖಂಡ ಕೆ.ರಮೇಶ್ ಯಾದವ್ ಅವರು ಕಣ್ಣ ಅವರಿಗೆ ಮೂವರು ಮಕ್ಕಳಿದ್ದಾರೆ ಎಂದು ಕಣ್ಣ ರವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಜೊತೆಗೆ ಮೂವರು ಮಕ್ಕಳಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ಸಲ್ಲಿಸಿದ್ದರು.
ಸಧ್ಯ ಮೂರೂವರೆ ವರ್ಷಗಳ ಕಾಲ ವಿಚಾರಣೆ ನಡೆಸಿದ ನಾಂಪಲ್ಲಿ ಕೋರ್ಟ್, ಅಂತಿಮವಾಗಿ ಮಹಾನಗರ ಪಾಲಿಕೆ ಜಿಎಚ್‍ಎಂಸಿ ಸದಸ್ಯರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿ ಕಣ್ಣ ರವರಿಗೆ ಬಿಸಿ ಮುಟ್ಟಿಸಿದೆ.
Comments are closed.